ಸುದ್ದಿಒನ್, ಚಿತ್ರದುರ್ಗ, ಜುಲೈ. 26 : ಭೂಮಿ ಮತ್ತು ವಸತಿ ರಹಿತ ಭೋವಿ ಒಡ್ಡರ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ನೆರವಾಗಬೇಕು. ಜತೆಗೆ ಸಾಮಾಜಿಕ ನ್ಯಾಯದಡಿ ಮಂತ್ರಿ ನೇಮಕ, ಓಡ್ ಸಂಸ್ಕøತಿ ಮತ್ತು ಭಾಷೆ ಅಧ್ಯಯನ ಅಕಾಡೆಮಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಮುದಾಯ ಮುಖಂಡರು ಭೋವಿ ಗುರುಪೀಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಭೋವಿ, ಒಡ್ಡರ ಸಮುದಾಯವು ವಲಸೆ ಜೀವನವನ್ನು ನಡೆಸುತ್ತಿದ್ದು, ಈ ಸಮುದಾಯದ ಕುಲ ಕಸುಬುಗಳಾದ ಕಲ್ಲು ಮತ್ತು ಮಣ್ಣಿನ ಕೆಲಸಗಳಿಗೆ ಆಧುನಿಕ ಯಂತ್ರಗಳು ಬಂದಿರುವುದರಿಂದ ವೃತ್ತಿ ಭದ್ರತೆ ಇಲ್ಲದೇ ಅತಂತ್ರವಾಗಿ ಜೀವಿಸುತ್ತಿದ್ದಾರೆ ಆದ್ದರಿಂದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೋರಿದರು.

ಭೋವಿ ಸಮುದಾಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಾತಿನಿದ್ಯವನ್ನು ಹೊಂದಿರುವ ಸಮುದಾಯವಾಗಿದೆ. ಈ ಸಮುದಾಯಕ್ಕೆ ತಮ್ಮ ಮಂತ್ರಿ ಮಂಡಲದಲ್ಲಿ ಒಬ್ಬರನ್ನ ಮಂತ್ರಿಯನ್ನಾಗಿ ನೇಮಿಸಿಕೊಂಡು ಸಾಮಾಜಿಕ ನ್ಯಾಯ ಕಲ್ಪಿಸಬೇಕು. ಭೋವಿ, ಒಡ್ಡರ ಸಮುದಾಯ ಒಡಿಸ್ಸಾ ಮೂಲದಿಂದ ದೇಶದ ನಾನಾ ರಾಜ್ಯಗಳಿಗೆ ವೃತ್ತಿಯಾಧರಿಸಿ ವಲಸೆಯನ್ನ ಬೆಳೆಸಿದ ಸಮುದಾಯವಾಗಿದೆ. ಇವರ ವಡ್ಡಾರಿ ಭಾμÉಯನ್ನು ಮಾತನಾಡುತ್ತಾ ದೇಶದ ಬೇರೆ ಬೇರೆ ಭಾಗಗಳಿಗೆ ಸಂಚರಿಸುತ್ತ ಆಯಾ ಭಾಷೆಯೊಂದಿಗೆ ವಡ್ಡಾರಿ ಭಾμÉಯನ್ನ ಬೆರೆತು ಮಾತನಾಡುತ್ತ ಬಂದಿರುವ ಈ ಸಮುದಾಯದ ಭಾಷೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನ ಅಧ್ಯಯನ ಮಾಡುವ ದೃಷ್ಠಿಯಿಂದ ಓಡ್ ಸಂಸ್ಕೃತಿ ಮತ್ತು ಭಾಷೆ ಅಕಾಡೆಮಿಯನ್ನ ಆರಂಭಿಸಬೇಕಿದೆ ಎಂದು ಮನವಿ ಮಾಡಿದರು.
ಭೋವಿ, ಒಡ್ಡರ ಸಮುದಾಯ ರಾಜ್ಯದ ನಾನಾ ಜಿಲ್ಲೆಗಳಲ್ಲಿ ತಮ್ಮದೇ ಆದಂತಹ ಪ್ರಾತಿನಿಧ್ಯವನ್ನು ಹೊಂದಿರುವ ಈ ಸಮುದಾಯಕ್ಕೆ ಈ ಬಾರಿ ವಿಧಾನಪರಿಷತ್ ಅಥವಾ ರಾಜ್ಯಸಭಾ ಸದಸ್ಯರನ್ನು ನೇಮಕ ಮಾಡಬೇಕು. ಸ್ವಾತಂತ್ರ್ಯ ಬಂದು ಏಳು ದಶಕಗಳನ್ನ ಕಾದಿದ್ದೇವೆ, ಆದರೆ ಇದುವರೆಗೂ ಭೋವಿ ಸಮುದಾಯದಿಂದ ಕುಲಪತಿಗಳ ನೇಮಕಾತಿ ಆಗಿರುವುದಿಲ್ಲ. ಈ ಸಮುದಾಯ ಈ ಹುದ್ದೆಯಿಂದ ವಂಚಿತವಾಗಿದೆ. ಹಾಗಾಗಿ ರಾಜ್ಯದ ಯಾವುದಾದರೂ ವಿವಿಗೆ ಈ ಸಮುದಾಯದ ಅರ್ಹ ಕುಲಪತಿಯನ್ನು ನೇಮಕ ಮಾಡಬೇಕಾಗಿದೆ.
ಕಲ್ಲು ಗಣಿಗಾರಿಕೆಯ 31-ಜೆಡ್ಸಿ ರ ಆದೇಶದ ಪ್ರಕಾರ ಈಗಾಗಲೇ ಅರ್ಜಿಗಳನ್ನು ಸಲ್ಲಿಸಲಾಗಿದೆ, ಅದರಲ್ಲಿ ಭೋವಿ, ಒಡ್ಡರದಲ್ಲ ಜಾತಿಯವರಲ್ಲದವರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ದಿನಾಂಕ: 02-01-2025ರ ಬೆಳಗಾವಿ ಕ್ಯಾಬಿನೆಟ್ನಲ್ಲಿ (ಭೋವಿ, ಒಡ್ಡರಿಗೆ) ಕುಲ ಕಸುಬುದಾರರಿಗೆ 3ಎಫ್ಬಿ ನಲ್ಲಿ ಅರ್ಜಿ ಸಲ್ಲಿಸಿದವರಿಗೆ 02 ಎಕರೆ ಜಮೀನು ನೀಡಲು ಆದೇಶವಾಗಿರುತ್ತದೆ. ಆದರೆ 31-ಜೆಡ್ಸಿ ರಲ್ಲಿ ಅರ್ಜಿ ಸಲ್ಲಿಸಿರುವವರು ಕುಲ ಕಸುಬುದಾರರಲ್ಲದವರು ಸಹ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹಾಗಾಗಿ 3ಎಫ್ಬಿ ಮತ್ತು 31-ಜೆಡ್ಸಿ ಯಲ್ಲಿ ಅರ್ಜಿ ಸಲ್ಲಿಸಿರುವ ಕುಲ ಕಸುಬುದಾರರಿಗೆ ಮೊದಲ ಆಧ್ಯತೆ ನೀಡಬೇಕು. ಜಿಲ್ಲಾಧಿಕಾರಿಗಳ ನೇತೃತ್ವದ ಸಿಂಗಲ್ ವಿಂಡೊದಲ್ಲಿ ಈ ಕೂಡಲೇ ಕುಲ ಕಸುಬುದಾರರಿಗೆ ಭೂಮಿ ಮಂಜೂರು ಮಾಡಲು ಆದೇಶಿಸಬೇಕಾಗಿ ಕೋರುತ್ತೇವೆ. ಈಗಾಗಲೇ ವರ್ಷಗಳೇ ಕಳೆದರೂ ಕೂಡ ಬೆಳಗಾವಿ ಕ್ಯಾಬಿನೆಟ್ನಲ್ಲಿ ತೀರ್ಮಾನಿಸಿದ ಆದೇಶ ಜಾರಿಯಾಗಿಲ್ಲ, ಈ ಆದೇಶವನ್ನು ತುರ್ತಾಗಿ ಜಾರಿಗೊಳಿಸಬೇಕು.
ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷರನ್ನ ನೇಮಿಸುವುದು ಮತ್ತು ಭೋವಿ ಅಭಿವೃದ್ಧಿ ನಿಗಮ ಸೇರಿದಂತೆ ಇತರೆ ನಿಗಮಗಳಿಗೆ ನಿರ್ದೇಶಕರುಗಳನ್ನು ನೇಮಿಸಬೇಕಾಗಿದೆ. ಶ್ರೀ ಸಿದ್ಧರಾಮೇಶ್ವರ ಅಧ್ಯಯನ ಪೀಠ ವಿಜಯಪುರದ ಮಹಿಳಾ ವಿವಿಯಲ್ಲಿದೆ. ಈ ಅಧ್ಯಯನ ಪೀಠವನ್ನು ಮಧ್ಯ ಕರ್ನಾಟಕದ ದಾವಣಗೆರೆ ವಿವಿಗೆ ವರ್ಗಾಯಿಸಲು ಕೋರಿದರು.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕಲ್ಲು ಗಣಿಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಭೋವಿ, ಒಡ್ಡರ ಜನಾಂಗದವರನ್ನ ಜೀತದಾಳುಗಳನ್ನಾಗಿ ದುಡಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇವುಗಳನ್ನು ಅಧ್ಯಯನ ಮಾಡಿ ಕಾನೂನು ರೀತಿ ವೇತನ ನೀಡುವಂತೆ ಕ್ರಮಜರುಗಿಸಬೇಕು.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಭೋವಿ, ಒಡ್ಡರ ಸಮುದಾಯವು ಅರಣ್ಯ ಭೂಮಿಯನ್ನ ಉಳುಮೆ ಮಾಡಿಕೊಂಡು ತಲಾ ತಲಾಂತರದಿಂದ ಜೀವಿಸಿಕೊಂಡು ಬರುತ್ತಿರುವ ಕುಟುಂಬಗಳಿವೆ. ಆ ಕುಟುಂಬಗಳ ಜೀವನಾಶ್ರಯ ಆ ಭೂಮಿಯೇ ಆಗಿರುವುದರಿಂದ ಅವರಿಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಭೂಮಿ ಮಂಜೂರು ಮಾಡಲು ಕ್ರಮಜರುಗಿಸಬೇಕಾಗಿದೆ. ಭೋವಿ ನಿಗಮಕ್ಕೆ ಈ ಹಿಂದೆ ಬಿಡುಗಡೆಯಾಗಿರುವ ಅನುದಾನ ದುರುಪಯೋಗವಾಗಿದ್ದು, ಸಮುದಾಯಕ್ಕೆ ಬಳಕೆಯಾಗಿರುವುದಿಲ್ಲವೆನ್ನುವ ವಿಚಾರ ತಮಗೆ ತಿಳಿದಿರುವ ವಿಷಯವಾಗಿದೆ. ಹಾಗಾಗಿ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಾಗಿದೆ ಎಂದು ಮನವಿ ಮಾಡಿದರು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಹಾಗೂ ಸಮುದಾಯದ ಮುಖಂಡರು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













