ಬೆಂಗಳೂರು: ಜನ ಸಮಸ್ಯೆಯಲ್ಲಿದ್ದಾಗ ಧರಣಿ ಮಾಡಿಲ್ಲ. ಈಗ ಅಹೋರಾತ್ರಿ ಧರಣಿ ಮಾಡಿ ಕಲಾಪ ಹಾಳು ಮಾಡುತ್ತಿದ್ದಾರೆಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಆ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗರಂ ಆಗಿದ್ದು, ಟ್ರೇಲರ್ ಅಷ್ಟೇ ತೋರಿಸಿದ್ದಾರೆ ಎಂದಿದ್ದಾರೆ.
ಈಶ್ವರಪ್ಪ ಅವರ ಹೇಳಿಕೆ ಖಂಡಿಸಿ, ಪ್ರತಿಭಟಿಸುತ್ತೇವೆ. ರಾಷ್ಟ್ರ ದ್ರೋಹಿ ಈಶ್ವರಪ್ಪ ಅವರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸುತ್ತೇವೆ. ಸೋಮವಾರ ಸದನದ ಹೊರಗೂ ಪ್ರತಿಭಟನೆ ನಡೆಸುತ್ತೇವೆ. ಅಷ್ಟೇ ಅಲ್ಲ ರಾಜ್ಯದ ಎಲ್ಲಾ ತಾಲೂಕು ಮಟ್ಟದಲ್ಲೂ ಈ ಹೋರಾಟ ಮುಂದುವರೆಯಲಿದೆ. ರಾಷ್ಟ್ರ ಧ್ವಜ ಹಿಡಿದು, ಅಚರ ಶಿಕ್ಷೆಗೆ ಒತ್ತಾಯಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ಅವರ ಬಗ್ಗೆಯೂ ಮಾತನಾಡಿದ್ದು, ಅವರು ಟ್ರೇಲರ್ ತೋರಿಸೋಕೆ ಬಂದಿದ್ದಾರೆ. ಅವರ ಟ್ರೇಲರ್ ನೋಡೋಕೆ ನಾವೂ ರೆಡಿ ಇದ್ದೀವಿ ಎಂದಿದ್ದಾರೆ. ಸಚುವ ಈಶ್ವರಪ್ಪ ರಾಷ್ಟ್ರಧ್ವಜದ ಬದಲಿಗೆ ಕೇಸರಿ ಧ್ವಜವನ್ನು ಹಾರಿಸಬಹುದು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಕಲಾಪದ ವೇಳೆಯೂ ಈ ವಿಚಾರ ತೆಗೆದು, ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ. ಕಲಾಪ ಸರಿಯಾಗಿ ನಡೆಯದೇ ಇದ್ದದ್ದಕ್ಕೆ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ.