Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಅಧಿಕಾರ ಸ್ವೀಕಾರ

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ನ 2026- 27ನೇ ಸಾಲಿನ ನೂತನ ಅಧ್ಯಕ್ಷರು, ಕಾರ್ಯದಶಿ೯ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮರುಳಪ್ಪ ಬಡಾವಣೆಯ Y. R. ಆದಿಶೇಷ ರೋಟರಿ ಭವನದಲ್ಲಿ ಇಂದು ವಿದ್ಯುಕ್ತವಾಗಿ ನೇರವೇರಿತು.

ನೂತನ ಅಧ್ಯಕ್ಷರಾಗಿ ರೊ| ಜಗನ್ನಾಥ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ರೊ| M.V. ರವಿ ಅವರಿಗೆ ಕುಂದಾಪುರದ ರೊ| ಅಭಿನಂದನ್ A ಶೆಟ್ಟಿ RPIC , ಮಾಜಿ ಡಿಸ್ಟ್ರಿಕ್ಟ್ ಗವರ್ನರ್, RI Dist.3182
ಇವರು ಪದವಿ ಪ್ರದಾನ ಮಾಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರೋಟರಿ ಸಂಸ್ಥೆ ಸಾಧನೆ , ಸ್ಪಂದನೆ, ಕೊಡುಗೆ,ಆರೋಗ್ಯ, ಅನುಕಂಪ ಹಾಗೂ ಸಾಕ್ಷರತೆಗೆ ಒತ್ತು ನೀಡಿ ಸೇವೆ ಸಲ್ಲಿಸುತ್ತಾ ಬಂದಿರುವ ಹಲವಾರು ಉದಾಹರಣೆಗಳನ್ನು ನೀಡಿ ಜಾತಿ ಧರ್ಮ ವರ್ಣಬೇಧಗಳನ್ನು ಮೀರಿದ ಸೇವೆಗಳನ್ನು ಹಾಗೂ ಇತ್ತೀಚಿನ ಕರೋನಾದ ಸಮಯದ ಸೇವೆಯನ್ನು ಸ್ಮರಿಸಿ, ಸಂಸ್ಥೆಯು ಸೇವಾ ಮನೋಭಾವನೆಯ ವಿಶ್ವ ನಾಯಕರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ ಎಂದರು. ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪೌಲ್ ಹ್ಯಾರಿಸ್ ರ ” ಆಡಿದ್ದನ್ನು ನಂಬದೇ ಇರಬಹುದು, ಆದರೆ ಮಾಡಿದ್ದನ್ನು ಜನ ನಂಬುತ್ತಾರೆ. ಎಂಬ ವಾಕ್ಯವನ್ನು ನೆನಪಿಸಿಕೊಂಡರು.

ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ರೊ| ಜಗನ್ನಾಥ ಶೆಟ್ಟಿ ಅವರು ಮಾತನಾಡಿ ಎಲ್ಲಾ ರೀತಿಯ ಶ್ರಮದಾನದಿಂದ ತನ್ನ ಪದವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ನಿಸ್ವಾರ್ಥ ಸೇವೆಯ ಸಂಕಲ್ಪದೊಂದಿಗೆ, ನಾಯಕತ್ವ ಗುಣಗಳು ನಾವು ಪಡೆದುಕೊಳ್ಳುವುದಕ್ಕಿಂತ ಸಮಾಜಕ್ಕೆ ನೀಡುವುದೇ ಮಾನದಂಡ ಎಂದು ತಿಳಿಸಿದರು. ಈ ವರ್ಷದ ರೋಟರಿ ಸಂಸ್ಥೆಯ ಜಾಗತಿಕ ಆಶಯದ ವಿಷಯ creating lasting impact ಅಂದರೆ ಶಾಶ್ವತ ಪ್ರಭಾವ ಸೃಷ್ಠಿಸುವುದು ಎಂಬುದನ್ನು ಸ್ಮರಿಸಿದರು.

ಒಬ್ಬರಿಂದ ಅವನ ಸೀಮಿತ ಸಾಧನೆ ಸಾಧ್ಯ, ಆದರೆ ಎಲ್ಲರೂ ಕೈ ಜೋಡಿಸಿ ಮಾಡಿದಾಗ ಹೆಚ್ಚಿನದನ್ನು ಸಾಧಿಸಲು ಸಾಧ್ಯ ಎಂದು ಹೇಳುತ್ತ ಸಾಮಾಜದ ಒಳಿತಿನ ಸೇವೆಗಾಗಿ ಎಲ್ಲರ ಸಹಕಾರ ಕೋರಿದರು.
ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ರೊ| ಶ್ರೀಕಾಂತ್ ಎ ವಿ ಪ್ರಾರ್ಥಿಸಿದರು.
ರೊ| ಉಮೇಶ್ ವೀರಣ್ಣ ತುಪ್ಪದ್ ರವರು ಕಾರ್ಯಕ್ರಮ ನಿರೂಪಿಸಿದರು.

ರೊ| N ಶಶಿಧರ ಗುಪ್ತ IPP. ಸ್ವಾಗತಭಾಷಣ ಹಾಗೂ ವಿದಾಯ ಭಾಷಣ ಮಾಡಿದರು. ರೊ| ಶಿವಕುಮಾರ್ N ಕಾರ್ಯದರ್ಶಿ, ವಾರ್ಷಿಕ ವರದಿಯನ್ನು ಸಂಕ್ಷಿಪ್ತವಾಗಿ ಸಲ್ಲಿಸಿದರು. ರೊ| ರವೀಂದ್ರ M.K IPDG RID 3160. ಕಾರ್ಯಕ್ರಮ ಉದ್ದೇಶಿಸಿ ರೋಟರಿ ಹಾಗೂ ಡಿಸ್ಟ್ರಿಕ್ಟ್ ಗವರ್ನರ್ ಸಂದರ್ಭದ ಸಾಧನೆಗಳನ್ನು ಮೆಲುಕು ಹಾಕಿ ಹೊಸ ಸದಸ್ಯರಿಗೆ ಸದಸ್ಯತ್ವ ನೀಡಿದರು.

ರೊ| ಮಧುಪ್ರಸಾದ್ K PDG RID 3160 ರವರು ಚಿತ್ರದುರ್ಗದ ರೋಟರಿ ಅಂಗ ಸಂಸ್ಥೆಗಳ ಸೇವಾ ಸಾಧನೆಗಳನ್ನು ಸ್ಮರಿಸಿ ಅದರ ಲಾಭಗಳನ್ನು ಸಮಾಜ ಪಡೆದುಕೊಳ್ಳಲು ವಿನಂತಿಸಿದರು.

ರೊ| ಅಬಿದ್ ಹುಸ್ಸೇನ್ Past President. ಅಭಿನಂದನ್ A ಶೆಟ್ಟಿಯವರ ಪರಿಚಯ ಮಾಡಿದರು.
ರೊ| ಗಿರೀಶ್ M ಕ್ಲಬ್ ಸಾರ್ಜೆಂಟ್ ಹಾಗೂ ರೊ| M V ರವಿಯವರು ಅಧ್ಯಕ್ಷರು ಹಾಗೂ ಅಸಿಸ್ಟೆಂಟ್ ಗವರ್ನರ್ ರವರಿಗೆ ಕಾಲರಿಂಗ್ ಮಾಡಿದರು.
ರೊ| L ಸವಿತಾ ಶಿವಕುಮಾರ್ ಅಸಿಸ್ಟೆಂಟ್ ಗವರ್ನರ್ ಚಿನ್ಮೂಲಾದ್ರಿ Zone – 8.ಇವರು ರೋಟರಿ ಕ್ಲಬ್ ನ ಬುಲೆಟಿನ್ ಬಿಡುಗಡೆ ಮಾಡಿದರು. ಇವರಿಗೆ ರೊ| ವೇದ ರವೀಂದ್ರ M R ಸಹಕಾರ ನೀಡಿದರು.
ರೊ| M.V. ರವಿ ಕಾರ್ಯದರ್ಶಿ ವಂದಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now