Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿರುದ್ಯೋಗಿಗಳಿಗೆ ಸುವರ್ಣಾವಕಾಶ: KEA ಇಲಾಖೆಯಿಂದ 4,723 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ!

---Advertisement---

ಬೆಂಗಳೂರು.ಜುಲೈ.12: ರಾಜ್ಯದ ನಿರುದ್ಯೋಗಿ ಯುವಜನತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಭರ್ಜರಿ ಸಿಹಿ ಸುದ್ದಿ ನೀಡಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 4,723 ಹುದ್ದೆಗಳ ಬೃಹತ್ ನೇಮಕಾತಿಗೆ ಸಂಬಂಧಿಸಿದಂತೆ ಪ್ರಾಧಿಕಾರವು ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಿದೆ.

ಈ ನೇಮಕಾತಿಯಲ್ಲಿ ಸಾಮಾನ್ಯ ವೃಂದದ (RPC) ಹುದ್ದೆಗಳೊಂದಿಗೆ ಕಲ್ಯಾಣ ಕರ್ನಾಟಕ (KK) ವೃಂದದ ಹುದ್ದೆಗಳೂ ಸೇರಿದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರತಿ ಇಲಾಖೆಯ ಹುದ್ದೆಗಳಿಗೂ ಪ್ರತ್ಯೇಕ ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ.

ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ?

ಕೆಎಸ್ಆರ್ ಪಿ (KSRP) ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಆಡಳಿತ ಅಧಿಕಾರಿ (VAO), ಭೂಮಾಪಕರು (Surveyor) ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KRIES) ಅಧೀನದಲ್ಲಿ ಕಾರ್ಯನಿರ್ವಹಿಸುವ ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ
ಪ್ರಮುಖ ಮಾಹಿತಿ: ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಇಂದಿನಿಂದಲೇ (ಜುಲೈ 12) ಆರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಯಮಾವಳಿಗಳನ್ನು ಅರಿತುಕೊಂಡು ಅರ್ಜಿ ಸಲ್ಲಿಸಲು ಕೋರಲಾಗಿದೆ.

ಪರೀಕ್ಷಾ ದಿನಾಂಕಗಳೂ ಪ್ರಕಟ!
ವಿಶೇಷವೆಂದರೆ, ಕೆಇಎ ಈ ಬಾರಿಯ ಅಧಿಸೂಚನೆಯಲ್ಲೇ ಪರೀಕ್ಷಾ ದಿನಾಂಕಗಳನ್ನೂ ಪ್ರಕಟಿಸಿದೆ. ಹೀಗಾಗಿ ಅಭ್ಯರ್ಥಿಗಳು ಕಾಲಹರಣ ಮಾಡದೆ ಇಂದಿನಿಂದಲೇ ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿಕೊಳ್ಳಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು, ನಿಗದಿತ ದಿನದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (IAS) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಸೂಚನೆಗಳ ವಿವರ ಹಾಗೂ ಅಧಿಕೃತ ಲಿಂಕ್‌ಗಳು:
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗಾಗಿ KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಕೆಳಗಿನ ಲಿಂಕ್‌ಗಳ ಮೂಲಕ ನೇರವಾಗಿ ಅಧಿಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಇರುವ ಕೊನೆ ದಿನಾಂಕವನ್ನು ನೋಡಿಕೊಂಡು ನಿಗದಿತ ದಿನದೊಳಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಲು ಕೋರಲಾಗಿದೆ.

ವಿವಿಧ ಹುದ್ದೆಗಳಿಗೆ ಸಂಬಂದಿಸಿದ ಅಧಿಸೂಚನೆಗಳ ಲಿಂಕ್ ಈ ಕೆಳಗೆ ನೀಡಿದ್ದು, ಅವುಗಳ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು. ಅಲ್ಲದೆ #KEA ವೆಬ್ ಸೈಟ್ ಗೆ ಹೋಗಿಯೂ ನೋಡಬಹುದು.

1) ಕೆಎಸ್ಆರ್ ಪಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಂಕ್
ksrpnkkkannada.pdf https://share.google/JMiKJTXmqMLPJvVj9…

ಕೆಎಸ್ಆರ್ ಪಿ: ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ಲಿಂಕ್:
ksrpkkkannada.pdf https://share.google/2pVCx8tb5pCBYpWSe…

2) ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಲಿಂಕ್
vao_rpc_notification_10072026kannada.pdf https://share.google/paO31uFaLTDxNtcNS…

ಗ್ರಾಮ ಆಡಳಿತಾಧಿಕಾರಿ: ಕಲ್ಯಾಣ ಕರ್ನಾಟಕ ವೃಂದದ ಲಿಂಕ್
vao_kk_notification_10072026kannada.pdf https://share.google/3p70sUPQJmEdnvVtb…

3) ವಸತಿ ಶಾಲಾ ಶಿಕ್ಷಕರ ನೇಮಕಾತಿ ಲಿಂಕ್
kries_rpc_notification_10072026kannada.pdf https://share.google/xYOCscdl78j25k1ht…

ವಸತಿ ಶಾಲಾ ಶಿಕ್ಷಕರು- ಕಲ್ಯಾಣ ಕರ್ನಾಟಕ ವೃಂದದ ಲಿಂಕ್
kries_kk_notification_10072026kannada.pdf https://share.google/aZ8ud1CBILia5p2qN…

4) ಸರ್ವೆ ಇಲಾಖೆ ಭೂಮಾಪಕರ ನೇಮಕಾತಿ ಲಿಂಕ್
RPC_landkannada.pdf https://share.google/mf8HxUTlCRy0Nr09N…

ಭೂಮಾಪಕರು: ಕಲ್ಯಾಣ ಕರ್ನಾಟಕ ವೃಂದ
kk_landkannada.pdf https://share.googleo8r5tfdvkl

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now