Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಜುಲೈ 29 ರಂದು ವಿಜೃಂಭಣೆಯ ಗುರುಪೂರ್ಣಿಮೆ: ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪೂಜೆ

---Advertisement---

ಚಿತ್ರದುರ್ಗ, ಜುಲೈ 08: ನಗರದ ಚಳ್ಳಕೆರೆ ರಸ್ತೆಯ ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನದ ಹತ್ತಿರವಿರುವ ಶ್ರೀ ಸಾಯಿ ಸಂಕಲ್ಪ ಸೇವಾ ಸಮಿತಿ (ರಿ) ವತಿಯಿಂದ, ಸಾಯಿ ಬಾಬಾ ಮಂದಿರದಲ್ಲಿ ಇದೇ ಜುಲೈ 29 ರಂದು ಗುರು ಪೌರ್ಣಮಿಯ ಪ್ರಯುಕ್ತ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಶೇಷ ಕಾರ್ಯಕ್ರಮಗಳ ವಿವರ
ಅಂದು ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಭಕ್ತರು ತಮ್ಮ ಸ್ವಹಸ್ತದಿಂದಲೇ ಬಾಬಾರವರಿಗೆ ಕ್ಷೀರಾಭಿಷೇಕ ಮಾಡಬಹುದಾಗಿದೆ. ಬೆಳಗ್ಗೆ 9 ಗಂಟೆಯಿಂದ ದಂಪತಿಗಳಿಗಾಗಿ ವಿಶೇಷ ಸಂಕಲ್ಪ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ಹಾಗೂ ಪೂರ್ಣ ದಿನದ ಪ್ರಸಾದ ವಿನಿಯೋಗ ವ್ಯವಸ್ಥೆ ಇರಲಿದೆ. ಇನ್ನು ಸಂಜೆ 5.30 ರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಮತ್ತೊಮ್ಮೆ ಮಹಾಮಂಗಳಾರತಿ ನೆರವೇರಲಿದೆ.

ವಿಶೇಷ ಲೋಹ (ನಾಣ್ಯ) ಸಮರ್ಪಣಾ ಸೇವೆ
ಇದೇ ಸಂದರ್ಭದಲ್ಲಿ ಮಂದಿರಕ್ಕೆ ಅತ್ಯಗತ್ಯವಾಗಿ ಬೇಕಾಗುವ ಸಿಂಹಾಸನ, ಪ್ರಭಾವಳಿ, ಕಿರೀಟ, ಪಾದುಕೆ ಹಾಗೂ ಗೋಪುರದ ಕಳಸ ಮಾಡಿಸಲು ಭಕ್ತರಿಂದ ಲೋಹ (ನಾಣ್ಯ) ಸಮರ್ಪಣಾ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ಸೇವೆಗೆ ರೂ. 1503 ಸೇವಾ ಶುಲ್ಕ ನಿಗದಿಪಡಿಸಲಾಗಿದೆ. ಲೋಹ ಸೇವೆ ಮಾಡುವ ಭಕ್ತರಿಗೆ ಸಂಕಲ್ಪ ಪೂಜೆಗೆ ಬೇಕಾಗುವ ಎಲ್ಲಾ ಪೂಜಾ ಸಾಮಗ್ರಿಗಳನ್ನು ಸಮಿತಿಯ ವತಿಯಿಂದಲೇ ನೀಡಲಾಗುತ್ತಿದ್ದು, ಭಕ್ತರು ತಪ್ಪದೇ ತಮ್ಮ ಸೇವಾ ರಸೀದಿಯನ್ನು ತರಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ
ನೇಹಾ – 9686243311
ಸೌಜನ್ಯ – 9663519888
ನಯನ್ – 9886170500
ಗುರುಪೂರ್ಣಿಮೆಯ ಈ ಪಾವನ ದಿನದಂದು ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸಾಯಿ ಬಾಬಾರವರ ದರ್ಶನ ಪಡೆದು ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now