ಬೆಂಗಳೂರು: ಪೀಣ್ಯ ಫ್ಲೈ ಓವರ್ ನಿಂದಾಗಿ ಸಂಚಾರ ಸರಾಗವಾಗುತ್ತಿತ್ತು. ಅದರಲ್ಲೂ ತುಮಕೂರು ಟು ಬೆಂಗಳೂರು ಸಂಚಾರ ಸೇರಿದಂತೆ ದೂರದ ಜಿಲ್ಲೆಗಳಿಗೆ ಹೋಗುವ ನಾನ್ ಸ್ಟಾಪ್ ಬಸ್ ಗಳಿಗೆ ತುಂಬಾ ಸಹಾಯವಾಗ್ತಾ ಇತ್ತು. ಆದ್ರೆ ಈಗ ಆ ಫ್ಲೈ ಓವರ್ ದುರಸ್ತಿಯಲ್ಲಿದ್ದು, ಕೆಲವು ದಿನಗಳಿಂದ ಬಂದ್ ಮಾಡಲಾಗಿದೆ. ಇದರಿಂದ ಉಂಟಾಗುತ್ತಿರುವ ಕಿರಿಕಿರಿ, ಟ್ರಾಫಿಕ್ ಜಾಮ್ ಅಷ್ಟಿಷ್ಟಲ್ಲ. ಇದೀಗ ಆ ಫ್ಲೈ ಓವರ್ ನೇ ಡೆಮಾಲಿಶ್ ಮಾಡುವ ಫ್ಲ್ಯಾನ್ ನಲ್ಲಿದ್ದಾರೆ ಎನ್ನಲಾಗಿದೆ.
ಹೌದು, ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದು, ಮೇಲ್ಸೆತುವೆ ಭಾರಿ ವಾಹನ ಓಡಾಟಕ್ಕೆ ಯೋಗ್ಯವಲ್ಲ. ಸದ್ಯಕ್ಕೆ ಲಘು ವಾಹನಗಳಿಗಷ್ಟೇ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಎನ್ಎಚ್ಎಐ ಲೋಡ್ ಟೆಸ್ಟಿಂಗ್ ನಲ್ಲಿ ಫ್ಲೈ ಓವರ್ ಸುರಕ್ಷಿತ ಅಲ್ಲ ಎನ್ನುವುದು ದೃಢಪಟ್ಟಿದೆ. ಈಗ ವಾಹನ ಸಂಚಾರಕ್ಕೆ ಅನುಮತಿ ನೀಡಿದರೆ ಫ್ಲೈ ಓವರ್ ಬಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಎರಡು ಪಿಲ್ಲರ್‌ಗಳನ್ನು ಸಂಪರ್ಕಿಸುವ ಕೇಬಲ್‌ನಲ್ಲಿ ಕಂಡುಬಂದಿರುವ ದೋಷ ಸರಿಪಡಿಸಿದರೂ, ಇದು ವಾಹನ ಸಂಚಾರಕ್ಕೆ ಸುರಕ್ಷಿತವಲ್ಲವೆಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರು ವರದಿ ನೀಡಿದ್ದಾರೆ.
ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಹೊರುತ್ತಾರೆ..? ಅವಕಾಶ ನೀಡುವ ಸಂಭವವೇ ಇಲ್ಲ. ಹೊಸದಾಗಿ ಫ್ಲೈ ಓವರ್ ನಿರ್ಮಿಸುವ ಬಗ್ಗೆ ಮನವಿ ಬಂದಿದೆ. ಆ ಫ್ಲೈ ಓವರ್ ಯಾರ ಕಾಲದಲ್ಲಿ ಆಗಿದೆ, ಯಾರು ನಿರ್ಮಿಸಿದ್ದಾರೆ ಎಂದು ನೋಡಬೇಕಿದೆ ಎಂದು ಸಿಎಂ ಹೇಳಿದ್ದಾರೆ.