ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೇನೆ ರಾಜೀನಾಮೆ ನೀಡಿದ್ದರು. ಎಲ್ಲವೂ ಮುಗೀತು ಎನ್ನುವಾಗಲೇ ಇದೀಗ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಯಾಕಂದ್ರೆ ಮರು ತನಿಖೆಗೆ ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ಒಂದನೇ ಎಸಿಎಂಎಂ ಕೋರ್ಟ್ ಗೆ ಪ್ರೊಟೆಸ್ಟ್ ಅರ್ಜಿ ಸಲ್ಲಿಕೆಯಾಗಿದೆ. ಪ್ರಕರಣ ಮರು ತನಿಖೆ ನಡೆಸಬೇಕೆಂದು ಕೋರಿ ಸಂತ್ರಸ್ತೆ ಪರ ವಕೀಲರು ಕೋರ್ಟ್ ಗೆ ಪ್ರೊಟೆಸ್ಟ್ ಅರ್ಜಿ ಸಲ್ಲಿಕೆಯಾಗಿದೆ.
ಈ ಅರ್ಜಿಯಲ್ಲಿ 10 ಅಂಶಗಳನ್ನ ಉಲ್ಲೇಖಿಸಲಾಗಿದೆ.
* ರಮೇಶ್ ಜಾರಕಿಹೊಳಿಯನ್ನು ಸರಿಯಾಗಿ ವಿಚಾರಣೆ ನಡೆಸಿಲ್ಲ
* ಎಸ್ಐಟಿ ಸರಿಯಾಗಿ ತನಿಖೆ ನಡೆಸಿಲ್ಲ
* ಆರೋಪಿ ರಮೇಶ್ ಜಾರಕಿಹೊಳಿ ಬಂಧಿಸುವ ಅವಕಾಶವಿದ್ದರು ಬಂಧಿಸಿಲ್ಲ.
* ಸಂತ್ರಸ್ತೆಯ ಹೇಳಿಕೆಯನ್ನು ಸಮರ್ಪಕವಾಗಿ ದಾಖಲಿಸಿಕೊಂಡಿಲ್ಲ.
* ಪ್ರಕರಣದ ಮಹಜರು ಪ್ರಕ್ರಿಯೆಯನ್ನು ಸರಿಯಾಗಿ ಮಾಡಿಲ್ಲ. ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕುವಲ್ಲಿ, ಸಂಗ್ರಹಿಸುವಲ್ಲಿ ಲೋಪ ಆಗಿದೆ.
* ಸಿಡಿಯ ವಿಡಿಯೋದಲ್ಲಿರುವವರ ಹೇಳಿಕೆಯನ್ನ ದಾಖಲಿಸಿಲ್ಲ.
* ಸಮರ್ಪಕ ವಿಚಾರಣೆ ನಡೆಸಿ ಸರಿಯಾಗಿ ಹೇಳಿಕೆ ದಾಖಲಿಸಿಲ್ಲ. ಸೌಮೇಂದು ಮುಖರ್ಜಿಯವರ ನಿಲುವು ಸಹ ಭಿನ್ನವಾಗಿತ್ತು ಎಂಬುದಾಗಿ ಅರ್ಜಿಯಲ್ಲಿ ದಾಖಲಿಸಲಾಗಿದೆ.