ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ಸೋಮಣ್ಣ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಬರೀ ಘೋಷಣೆಯಾಗಿತ್ತು. ನಮ್ಮ ಕಾಲದಲ್ಲಿ ಅಭಿವೃದ್ಧಿ ಮಾಡಿದ್ದೇವೆಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಒಂದು ಮನೆ ನೀಡಿಲ್ಲ ಎಂಬ ಸಿದ್ದರಾಮಯ್ಯ ಅವರ ಮಾತಿಗೆ ಉತ್ತರ ನೀಡಿರುವ ಸೋಮಣ್ಣ, ರಾಜಕೀಯಕ್ಕಾಗಿ ನಮ್ಮ ಮೇಲೆ ಆರೋಪ ಮಾಡಬಾರದು. ನಾವೂ ಕೊಟ್ಟಿದ್ದು, ನೀವೂ ಕೊಟ್ಟಿದ್ದು ಅಂತಲ್ಲ. ಜನರಿಗೆ ಮನೆ ಸಿಗಬೇಕು ಅಷ್ಟೆ. ಯಾರು ಏನು ಅವರವರ ಮನೆಯಿಂದ ಮನೆ ತಂದು ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಯಾರ್ ಯಾರು ಏನ್ ಮಾಡ್ತಿದ್ದಾರೆ ಅನ್ನೋದನ್ನ ಸರ್ಕಾರ ಗಮನಿಸ್ತಾ ಇದೆ. ಇಲ್ಲಿ ಯಾರು ದೊಡ್ಡವರಲ್ಲ. ಎಲ್ಲರಿಗಿಂತ ಹೆಚ್ಚಾಗಿ ದೇಶ ದೊಡ್ಡದು. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತ ಸಂಘಟನೆಗಳನ್ನ ಸರ್ಕಾರ ಬಗ್ಗು ಬಡಿಯಲಿದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡದಿರಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.