ತಿರುವನಂತಪುರಂ: ರಾಜ್ಯದಲ್ಲಿ ತಲೆ ಎತ್ತಿದ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಕೇರಳ ಗವರ್ನರ್ ಬುದ್ದಿ ಮಾತು ಹೇಳಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಹಿಜಾಬ್ ಅನಿವಾರ್ಯವಲ್ಲ. ಕುರಾನ್ ನಲ್ಲಿ ಕೂಡ ಹಿಜಾಬ್ ಕುರಿತು ಯಾವುದೇ ಉಲ್ಲೇಖವಿಲ್ಲ. ಹಿಜಾಬ್ ಇಸ್ಲಾಂ ಆಚರಣೆಯಲ್ಲಿ ಅಂತರ್ಗತವಾಗಿಲ್ಲ. ಕೆಲವು ಶಾಲಾ-ಕಾಲೇಜುಗಳಲ್ಲಿ ಸಿಖ್ಖರಿಗೆ ಟರ್ಬನ್ ಧರಿಸಲು ಅವಕಾಶವಿದೆ. ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ವಾದ ಮಂಡಿಸುವುದೇ ಅಸಂಬದ್ಧವಾಗಿದೆ ಎಂದಿದ್ದಾರೆ.
ಹೊರಗಿನವರ ಪ್ರಚೋದನೆಗೆ ಒಳಗಾಗಬೇಡಿ. ಓದಿನ ಕಡೆ ಮೊದಲು ಗಮನ ಕೊಡಿ. ಕೆಲವು ಮುಸ್ಲಿಂ ಮಹಿಳೆಯರನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಮುಸ್ಲಿಂ ಮಹಿಳೆಯರನ್ನು ಅಂಧಕಾರದ ಯುಗಕ್ಕೆ ತಳ್ಳಲು ಬಯಸುತ್ತಿದೆ ಎಂದು ಗವರ್ನರ್ ಮೊಹಮ್ಮದ್ ಖಾನ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.