Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ತರಬೇತಿಯ ಅಗತ್ಯವಿದೆ : ಪ್ರೊ. ಎಂ.ಎಸ್.ಸುಧಾದೇವಿ

Facebook
Twitter
Telegram
WhatsApp

ಚಿತ್ರದುರ್ಗ : ಸರ್ಕಾರಿ ಕಾಲೇಜು, ಅನುದಾನಿತ ಕಾಲೇಜುಗಳಲ್ಲಿ ಕೆಲಸದ ಒತ್ತಡ ಇರುವುದರಿಂದ ಪ್ರತಿದಿನವೂ ಬೇರೆ ಕಾಲೇಜಿನ ಇಲ್ಲವೇ ಹಿರಿಯರ ಸಲಹೆ ಪಡೆದುಕೊಂಡು ಕೆಲಸ ಮಾಡುವಂತ ಪರಿಸ್ಥಿತಿ ಇರುವುದರಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ತರಬೇತಿಯ ಅಗತ್ಯವಿದೆ ಎಂದು ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಎಸ್.ಸುಧಾದೇವಿ ಹೇಳಿದರು.

ಸರಸ್ವತಿ ಕಾನೂನು ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವೃತ್ತಿಪರ ಅಭಿವೃದ್ದಿ ಹಾಗೂ ಆಡಳಿತಾತ್ಮಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪದವಿ, ಬಿ.ಇ.ಡಿ, ಕಾನೂನು ಹೀಗೆ ಬೇರೆ ಬೇರೆ ಕಾಲೇಜುಗಳಿಗೆ ಒಂದೊಂದು ಆದೇಶ ಅನ್ವಯವಾಗುತ್ತದೆ.

ಏನೇನು ಆದೇಶ ಹೇಗೆ ನಿರ್ವಹಿಸಿ ಕೆಲಸದ ಒತ್ತಡ ಎಲ್ಲಾ ಗೊಂದಲಗಳಿಗೂ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದಕ್ಕಾಗಿ ತರಬೇತಿ ಅತ್ಯವಶ್ಯಕವಾಗಿ ಬೇಕು. ಸರ್ಕಾರಿ ಕಾಲೇಜು ಹಾಗೂ ಅನುದಾನಿತ ಕಾಲೇಜುಗಳಲ್ಲಿಯೂ ಸಾಕಷ್ಟು ಒತ್ತಡಗಳಿವೆ. ಉನ್ನತ ಶಿಕ್ಷಣ ನೀತಿ, ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಬದಲಾವಣೆಯಾಗಿರುವುದರಿಂದ ತಂತ್ರಜ್ಞಾನಕ್ಕೆ ತಕ್ಕಂತೆ ಮೇಲ್ದರ್ಜೆಗೇರಿದಾಗ ಮಾತ್ರ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು.

ಇ.ಮೇಲ್, ಗೂಗಲ್‌ನಲ್ಲಿ ಹುಡುಕಾಡಿ ಕ್ಷಣಾರ್ಧದಲ್ಲಿಯೇ ಹೊಸ ಹೊಸ ಆದೇಶಗಳನ್ನು ಪಡೆದುಕೊಳ್ಳುವಷ್ಟು ತಂತ್ರಜ್ಞಾನ ಮುಂದುವರೆದಿದೆ. ಅನುದಾನಿತ ಸಂಸ್ಥೆಗಳಲ್ಲಿ ಸಿಬ್ಬಂದಿಗಳಿಗೆ ತರಬೇತಿಯಿಲ್ಲದ ಕಾರಣ ಅಡ್ವಾನ್ಸ್ಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ. ತ್ವರಿತವಾಗಿ ಮಾಹಿತಿಗಳನ್ನು ಪಡೆದುಕೊಳ್ಳಲು ಹಾಗೂ ಮಾಹಿತಿಗಳನ್ನು ನೀಡಲು ಕಡ್ಡಾಯವಾಗಿ ಕಂಪ್ಯೂಟರ್ ತರಬೇತಿ ಬೇಕೆ ಬೇಕು. ಇದರಿಂದ ಕೆಲಸದಲ್ಲಿ ಅರ್ಧದಷ್ಟು ಒತ್ತಡ ಕಡಿಮೆಯಾಗುತ್ತದೆ ಎಂದರು.

ಬೆಂಗಳೂರು ಕಾಲೇಜು ಶಿಕ್ಷಣ ಆಯುಕ್ತರ ಕಚೇರಿ ಉನ್ನತ ಶಿಕ್ಷಣ ಸೌಧದ ಗೆಜೆಟೆಡ್ ಮ್ಯಾನೇಜರ್ ಟಿ.ಆರ್.ಮಂಜುನಾಥ್ ತರಬೇತಿ ವಿಷಯ ಪ್ರವೇಶ ಸಂವಾದ ಕುರಿತು ಮಾತನಾಡುತ್ತ ಸರ್ಕಾರಿ, ಅನುದಾನಿತ ಸಂಸ್ಥೆಗಳಾಗಲಿ ವೃತ್ತಿಯಲ್ಲಿ ಪ್ರಗತಿ ಹೊಂದಬೇಕಾದರೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ತರಬೇತಿ ಪಡೆಯಬೇಕು. ಪ್ರತಿಯೊಂದು ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಗಣಕ ಯಂತ್ರ, ಗೂಗಲ್, ಫೇಸ್‌ಬುಕ್, ವಾಟ್ಸ್ಪ್‌ಗಳಲ್ಲಿಯೇ ಅನೇಕ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ದೈನಂದಿನ ಆಡಳಿತದಲ್ಲಿ ಎದುರಿಸುವ ಸಮಸ್ಯೆಗಳಿಗೆ ನೌಕರರು ಮತ್ತು ಮುಖ್ಯಸ್ಥರು ಪರಿಹಾರ ಕಂಡುಕೊಳ್ಳಬೇಕಾದರೆ ಸರ್ಕಾರಿ ನಿಯಮದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಡಿ.ಗ್ರೂಪ್ ನೌಕರನಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಯೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ದಿ ಪಥದಲ್ಲಿ ಹೋಗಲು ಸಾಧ್ಯ ಎಂದು ಹೇಳಿದರು.

ಆಡಳಿತದಲ್ಲಿ ಮುಖ್ಯಸ್ಥರು ಹೇಳುವ ಕೆಲಸವನ್ನು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಮಾಡಬೇಕು. ಯಾರು ಮೇಲು, ಯಾರು ಕೀಳಲ್ಲ. ಸರ್ಕಾರದ ಯೋಜನೆಗಳು ದಿನೆ ದಿನೆ ಜಾಸ್ತಿಯಾಗುತ್ತಿದೆ. ಸಮರ್ಪಕವಾಗಿ ಜನರಿಗೆ ಸೇವೆ ನೀಡಬೇಕಾದರೆ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲೇಬೇಕು. ಅದಕ್ಕಾಗಿ ಕೆಲಸ ಮಾಡುವ ಕ್ಷೇತ್ರದಲ್ಲಿ ಜ್ಞಾನವಿರಬೇಕು. ತರಬೇತಿಯಿಂದ ಕೌಶಲ್ಯ ಸಿಗುತ್ತದೆ. ಕರ್ತವ್ಯ ಪ್ರಜ್ಞೆ ಹೆಚ್ಚಾಗಿ ಯಾವ್ಯಾವ ಸಮಸ್ಯೆಗಳಿಗೆ ಏನೇನು ನಿಯಮಗಳನ್ನು ಓದಬೇಕು ಎನ್ನುವುದನ್ನು ತರಬೇತಿಯಲ್ಲಿ ತಿಳಿದುಕೊಳ್ಳಬಹುದು ಎಂದು ನುಡಿದರು.

ಗೂಗಲ್‌ನಿಂದ ಸಣ್ಣ ಸಣ್ಣ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಪ್ರತಿಯೊಂದು ಹಂತವನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಿದಾಗ ಒತ್ತಡ ಸಮಸ್ಯೆಗಳನ್ನು ನಿಭಾಯಿಸುವುದು ಕಷ್ಟವಾಗುವುದಿಲ್ಲ. ಸೌಲತ್ತುಗಳನ್ನು ಪಡೆಯಬೇಕಾದರೆ ಇರುವ ಮನಸ್ಥಿತಿ ಜನರಿಗೆ ಸೇವೆ ನೀಡುವಾಗಲೂ ಇರಬೇಕು. ಅದಕ್ಕಾಗಿ ಅಧ್ಯಯನಶೀಲರಾಗಬೇಕು ಎಂದು ಹೇಳಿದರು.

ಸರಸ್ವತಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಪ್ರೊ.ನಟರಾಜ್ ಡಿ.ಹೆಚ್. ವೆಂಕಟೇಶ್ವರ ಬಿ.ಇ.ಡಿ.ಕಾಲೇಜಿನ ಪ್ರಾಂಶುಪಾಲರಾದ ರುದ್ರಮುನಿ, ಎಸ್.ಜೆ.ಎಂ.ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಈಶ್ವರಪ್ಪ ವೇದಿಕೆಯಲ್ಲಿದ್ದರು.

ಸಹಾಯಕ ಗ್ರಂಥ ಪಾಲಕ ಷಣ್ಮುಖ ಎಸ್. ಪ್ರಾರ್ಥಿಸಿದರು. ಸರಸ್ವತಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ, ಸ್ವಾಗತಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ.ಭೈರಸಿದ್ದಪ್ಪ ಜಿ.ಈ. ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ.ಮುರುಗೇಶ್ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!