ಬೆಂಗಳೂರು: ಹಿಜಾಬ್ ವಿವಾದ ಸದ್ಯ ಸುಪ್ರೀಂ ಕೋರ್ಟ ಅಂಗಳದಲ್ಲಿದೆ. ಕುಂದಾಪುರದ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಇಡೀ ರಾಜ್ಯಕ್ಕೆ ಹರಡಿದೆ. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಮುಂದಿನ ಆದೇಶದವರೆಗೂ ಶಾಲಾ ಕಾಲೇಜುಗಳಿಗೆ ಯಾರು ಕೂಡ ಧಾರ್ಮಿಕ ವಸ್ತ್ರ ಧರಿಸಿ ಬರು ಹಾಗಿಲ್ಲ ಎಂದು ಕೋರ್ಟ್ ಆರ್ಡರ್ ಮಾಡಿದೆ.
ಈ ಬಗ್ಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿದ್ದು, ಮುಸ್ಲಿಂ ಮಹಿಳೆಯರ ಬೆಳವಣಿಗೆ ಸಹಿಸಲು ಅವರಿಗೆ ಆಗ್ತಿಲ್ಲ. ಹೀಗಾಗಿಯೇ ಈ ರೀತಿ ನಡೆದುಕೊಳ್ತಿದ್ದಾರೆ. ಕೆಲವು ಮಹಿಳೆಯರೇ ಹಿಜಾಬ್ ಬಿಟ್ಟು ಶಿಕ್ಷಣಕ್ಕೆ ಒತ್ತು ನೀಡಿ ಬರಲು ನಿರ್ಧರಿಸಿದ್ದರು. ಆದ್ರೆ ಈ ಮಧ್ಯೆ ಬೇರೆಯೇ ನಡೆಯುತ್ತಿದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೈವಾಡಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ಮುಂದೆ ಬರಬಾರದು ಎಂಬ ಉದ್ದೇಶ ಅವರದ್ದು. 6 ಹೆಣ್ಣು ಮಕ್ಕಳ ಹಿಂದೆ ಹಲವಾರು ಕಾಣದ ಕೈಗಳು ಇವೆ. ಅವರಿಗೆ ಮುಸ್ಲಿಂ ಮಹಿಳೆಯರು ಶಾಲೆಗೆ ಬರುವುದು ಇಷ್ಟವಿಲ್ಲ. ಮುಸ್ಲಿಂ ಮಹಿಳೆಯರು ಮನೆಯಲ್ಲೆ ಇರುವ ಉದ್ದೇಶ ಎಂದಿದ್ದಾರೆ.