Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲಾ ಖಾಸಗಿ ದಂತವೈದ್ಯರ ಸಂಘದ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಡಾ. ಮಹಾಂತೇಶ್ ಗಿಡ್ಡೋಬನಹಳ್ಳಿ ಆಯ್ಕೆ

---Advertisement---

ಸುದ್ದಿಒನ್, ಚಿತ್ರದುರ್ಗ, ಜೂನ್. 08 :  ನಗರದ ಆರ್.ಟಿ.ಓ. ಕಚೇರಿ ಬಳಿಯಿರುವ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘದ (ರಿ) ವತಿಯಿಂದ ದಂತವೈದ್ಯರ ಮಾಸಿಕ ಸಭೆ ಹಾಗೂ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ನಗರದ ಹಲವಾರು ಖಾಸಗಿ ದಂತವೈದ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ನಡೆದ ಉಪನ್ಯಾಸದಲ್ಲಿ ದಾವಣಗೆರೆಯ ಖ್ಯಾತ ದಂತ ಚಿಕಿತ್ಸಕರಾದ ಡಾ. ಸಂತೋಷ್ ದೊಡ್ಡಮನಿ ಅವರು ಭಾಗವಹಿಸಿ, ‘ಜಾಗತೀಕರಣದ ಸವಾಲುಗಳು ಹಾಗೂ ಬದಲಾಗುತ್ತಿರುವ ಆಧುನಿಕ ದಂತ ಚಿಕಿತ್ಸೆ’ ಮತ್ತು ‘ದಂತ ಚಿಕಿತ್ಸೆಗಳಲ್ಲಿ ಆಂಟಿ ಬಯೋಟಿಕ್ ಗಳ ಮಹತ್ವ ಹಾಗೂ ವಿಧಾನಗಳ’ ಬಗ್ಗೆ ಸುದೀರ್ಘವಾಗಿ ಉಪನ್ಯಾಸ ನೀಡಿದರು.

ಇದರೊಂದಿಗೆ, ಚಿತ್ರದುರ್ಗದ ಖ್ಯಾತ ದಂತ ವೈದ್ಯರಾದ ಡಾ. ಸುನೀಲ್ ವಡವಡಗಿ ಅವರು ಕೃತಕ ಬುದ್ಧಿಮತ್ತೆ (AI) ಹಾಗೂ ದಂತ ಚಿಕಿತ್ಸೆಗಳಲ್ಲಿ ಎದುರಾಗುವ ಸವಾಲುಗಳ ಕುರಿತು ಉಪಯುಕ್ತ ಮಾಹಿತಿ ಹಂಚಿಕೊಂಡರು. ಈ ವಿಶೇಷ ಕಾರ್ಯಾಗಾರದ ಪ್ರಾಯೋಜಕತ್ವವನ್ನು ‘ಮ್ಯಾನ್ ಕೈಂಡ್ ಫಾರ್ಮಾ’ ಕಂಪನಿ ವಹಿಸಿಕೊಂಡಿತ್ತು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘದ (ರಿ.) 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ಯಶಸ್ವಿಯಾಗಿ ಜರುಗಿತು.

ಜಿಲ್ಲಾ ಸಂಘದ ಅಧ್ಯಕ್ಷರಾಗಿ ಡಾ.ಮಹಾಂತೇಶ್ ಗಿಡ್ಡೋಬನಹಳ್ಳಿ, ಖಜಾಂಚಿಗಳಾಗಿ ಡಾ. ಗೋವರ್ಧನ ಹಾಗೂ ಕಾರ್ಯದರ್ಶಿಗಳಾಗಿ ಡಾ.ಸುನಿಲ್ ವಡವಡಗಿ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷರಾದ ರಾಮಲಿಂಗಯ್ಯ ಶೆಟ್ಟಿರವರು ಅಧಿಕಾರ ಹಸ್ತಾಂತರ ಮಾಡಿ ನೂತನ ಕಾರ್ಯಕಾರಿ ಸಮಿತಿಗೆ ಶುಭ ಕೋರಿದರು.
ಸಭೆಯಲ್ಲಿ ಸಂಘದ ವಾರ್ಷಿಕ ನಡಾವಳಿಗಳನ್ನು ಅಧಿಕೃತವಾಗಿ ಮಂಡಿಸಲಾಯಿತು. ಸಭೆಯಲ್ಲಿದ್ದ ಸರ್ವ ದಂತ ವೈದ್ಯರು ಈ ನಡಾವಳಿಗಳಿಗೆ ಒಂದು ಧ್ವನಿಯಲ್ಲಿ ಒಪ್ಪಿಗೆ ಹಾಗೂ ಅನುಮೋದನೆ ಸೂಚಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now