ಬೆಂಗಳೂರು: ಹಿಜಬ್ ವರ್ಸಸ್ ಕೇಸರಿ ಶಾಲು ಗಲಾಟೆ ಎಲ್ಲಿಯೋ ಆರಂಭವಾಗಿ ಇನ್ನೆಲ್ಲಿಗೋ ಮುಟ್ಟುತ್ತಿರುವುದು ವಿಷಾದವೇ ಸರಿ. ರಾಷ್ಟ್ರ ಧ್ವಜವನ್ನೇ ಕೆಳಗಿಳಿಸಿ ಕೇಸರಿ ಧ್ವಜ ಹಾಕುವುದೆಂದರೆ..? ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇವತ್ತಿನ ದಿನ ನನ್ನ 40 ವರ್ಷಗಳ ರಾಜಕೀಯ ವೃತ್ತಿಯಲ್ಲಿ ಇವತ್ತು ಅತಿ ದುಃಖದ ದಿನವಾಗಿದೆ. ಆ ದುಃಖವನ್ನು ಹೇಳಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನಮ್ಮ ಧ್ವಜವೇ ನಮ್ಮ ಧರ್ಮ. ನಮ್ಮ ದೇಶ ಕಟ್ಟಲು ಐಕ್ಯತೆಗೆ ಹಲವರು ಪ್ರಾಣ ಕೊಟ್ಟಿದ್ದಾರೆ.
ನಮ್ಮ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ. ರಾಜ್ಯದಲ್ಲಿ ಏನ್ ಆಗ್ತಿದೆ. ಕೇಸರಿ ಬಗ್ಗೆ ಗೌರವ ಇದೆ. ನಮ್ಮ ರಾಷ್ಟ್ರ ಧ್ವಜದಲ್ಲೇ ಕೇಸರಿ ಇದೆ. ಹೀಗಿರುವಾಗ ಕೇಸರಿ ಧ್ವಜ ಹಾರಿಸುವುದು ಏನಿತ್ತು..? ಸಿಎಂ ಅವರಿಗೆ ಮನವಿ ಮಾಡಿಕೋಳ್ತೇವೆ. ರಾಜ್ಯ ಹಿಂದಕ್ಕೆ ಹೋಗ್ತಿದೆ. ಶಾಂತಿ ಕಾಪಾಡಬೇಕು. ಸಮಸ್ಯೆ ಬಗೆ ಹರಿಯುವ ತನಕ ಒಂದು ವಾರಗಳ ಶಾಲಾ ಕಾಲೇಜಿಗೆ ರಜೆ ಕೊಡಲಿ ಎಂದಿದ್ದಾರೆ.