ಸುದ್ದಿಒನ್, ಚಿತ್ರದುರ್ಗ, ಮೇ. 22 : ವೈದ್ಯಕೀಯ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ, ಹಿರಿಯೂರು ತಾಲ್ಲೂಕಿನ ಬಸಪ್ಪನಮಾಳಿಗೆ ಗ್ರಾಮದ ಹೆಮ್ಮೆಯ ಪುತ್ರ ಡಾ. ಕಂಠೀರವ ಬಾಲ ಸರಸ್ವತಿ (86 ವರ್ಷ) ಅವರು ಹೃದಯಾಘಾತದಿಂದ ಮೇ. 09 ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅಗಲಿದ ಮಹಾ ಚೇತನ ಡಾ. ಕಂಠೀರವ ಬಾಲಸರಸ್ವತಿ ರವರಿಗೆ ನುಡಿನಮನ ಸಲ್ಲಿಸಲು ಇದೇ ಮೇ-24ರ ಭಾನುವಾರ ಬೆಳಿಗ್ಗೆ 11-00 ಗಂಟೆಗೆ ಚಿತ್ರದುರ್ಗ ನಗರದ ತುರುವನೂರು ರಸ್ತೆಯ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ನುಡಿನಮನ – ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿದೆ. ಇವರ ಸೇವೆಯನ್ನು ಪಡೆದು ಉಪಕೃತವಾದ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು, ಶಿಷ್ಯವೃಂದ ಅಭಿಮಾನಿ ಬಳಗ ಈ ಸಭೆಯಲ್ಲಿ ಪಾಲ್ಗೊಂಡು ಶ್ರದ್ದಾಂಜಲಿ ಸಲ್ಲಿಸಲು ಡಾ.ಕಂಠೀರವ ಬಾಲಸರಸ್ವತಿ ಅಭಿಮಾನ ಬಳಗ ಮತ್ತು ಕುಟುಂಬ ವರ್ಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿನ್ನೆಲೆ :
ಕಂಠೀರವ ಬಾಲಸರಸ್ವತಿ ಯವರು ಹಿರಿಯೂರು ತಾಲೂಕಿನ ಬಸಪ್ಪನ ಮಾಳಿಗೆ ಗ್ರಾಮದ ಬಿ.ಜಿ. ತಿಮ್ಮಾರೆಡ್ಡಿ ಮತ್ತು ತಿಪ್ಪಮ್ಮ ದಂಪತಿಗಳ ಮಗನಾಗಿ 22/2/1941 ರಂದು ಹಿರಿಯ ಮಗನಾಗಿ ಜನಿಸಿದರು.1956 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಮರಡಿಹಳ್ಳಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಸಾಧನೆ ಮಾಡಿದವರು. ಅನಂತರ ಚಿತ್ರದುರ್ಗದಲ್ಲಿ inter-mediate ಪೂರ್ಣಗೊಳಿಸಿ ಅನಂತರ ‘ಎಂ.ಬಿ.ಬಿ.ಎಸ್ ‘ ಕೋರ್ಸ್ ಗೆ ಸೇರಿ 1964 ರಲ್ಲಿ ಪೂರ್ಣ ಗೊಳಿಸಿ ‘Anasthesia’ ವಿಭಾಗದಲ್ಲಿ‘ಎಂ.ಡಿ’ ಪೂರ್ಣಗೊಳಿಸಿ ‘1966’ ರಲ್ಲಿ ಇಂಗ್ಲೆಂಡ್ ನಲ್ಲಿ ವೈದ್ಯಕೀಯ ಸೇವೆ ಆರಂಭಿಸಿದರು.
ಸಮಾಜಮುಖಿ ಸೇವೆ:
ಚಿಕಾಗೋ ದಲ್ಲಿ ಹದಿನೈದು ವರ್ಷ ಸೇವೆ ಸಲ್ಲಿಸಿ 1985 – 86 ರಲ್ಲಿ ಭಾರತಕ್ಕೆ ಹಿಂದಿರುಗಿ ಬೆಂಗಳೂರಿನ ಪ್ರತಿಷ್ಟಿತ ರಾಮಯ್ಯ ಮೆಡಿಕಲ್ ಕಾಲೇಜಿನ ಮುಖ್ಯಸ್ಥರು ಮತ್ತು ದಾವಣಗೆರೆ ಎಸ್. ಎಸ್. ಮೆಡಿಕಲ್ ಕಾಲೇಜಿನ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದರು. ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ಬಸವೇಶ್ವರ ಆಸ್ಪತ್ರೆ ಸ್ಥಾಪನೆ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮತ್ತು ಬೆಳ್ಳೂರಿನ ಆದಿ ಚುಂಚನಗಿರಿ ಆಸ್ಪತ್ರೆ ಯಲ್ಲೂ ಸೇವೆ ಸಲ್ಲಿಸಿದ್ದರು ಹಾಗೂ ‘kamachur institute of medical science advisor’ ಆಗಿ ಅನೇಕ ಮೆಡಿಕಲ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಸೌತ್ ಸೆಂಟ್ರಲ್ ಪಾಸ್ಟ್ ಪ್ರೆಸಿಡೆಂಟ್, ಬೆಂಗಳೂರಿನ ಸ್ಟಡಿ ಸರ್ಕಲ್ ಪಾಸ್ಟ್ ಪ್ರೆಸಿಡೆಂಟ್ ಆಗಿದ್ದರು. ಮತ್ತು ಅಧ್ಯಕ್ಷರು student wellfare trust ಮರೆಡಿಹಳ್ಳಿ ಹಾಗೂ ಗೌರವಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಮರೆಡಿಹಳ್ಳಿ ಆಗಿದ್ದರು. ವೈದ್ಯ ವೃತ್ತಿ ಯೊಂದಿಗೆ ಸಮಾಜ ಮುಖಿ ಸೇವೆ ಮಾಡುತ್ತ ವಿದ್ಯಾಭ್ಯಾಸ ಮಾಡಿದ ಊರಿಗೆ, ಶಾಲೆಗಳಿಗೆ ಹಾಗು ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಹಾಯ ಹಸ್ತ ಚಾಚಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















