ಚಿಕ್ಕಮಗಳೂರು: ಹಿಜಬ್ ಮತ್ತು ಜೇಸರಿ ಶಾಲು ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ. ಕುಂದಾಪುರ ಶಾಲೆಯಲ್ಲಿ ಮಾತ್ರ ಭುಗಿಲೆದ್ದ ವಿವಾದ ಈಗ ರಾಜ್ಯದ ಕೆಲವು ಜಿಲ್ಲೆಯಲ್ಲು ಸೃಷ್ಟಿಯಾಗಿದೆ. ಇದೀಗ ಕೇಸರಿ – ಹಿಜಬ್ ನಡುವೆ ನೀಲಿ ಶಾಲು ಕೂಡ ಸದ್ದು ಮಾಡಲು ಹೊರಟಿದೆ.
ಜಿಲ್ಲೆಯ ಐಡಿಎಸ್ ಜಿ ಶಾಲೆಯ ವಿದ್ಯಾರ್ಥಿಗಳು ಇಂದು ನೀಲಿ ಶಾಲು ಧರಿಸಿ ಕಾಲೇಜಿಗೆ ಬಂದು ಪ್ರತಿಭಟಿಸಿದ್ದಾರೆ. ಹಿಜಬ್ ಧರಿಸೋದಕ್ಕೆ ವಿದ್ಯಾರ್ಥಿಬಿಯರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಆಜಾದ್ ಪಾರ್ಕ್ ನಲ್ಲಿ ಇಂದು ಪ್ರತಿಭಟನೆ ನಡೆದಿದ್ದು, 500ಕ್ಕೂ ಮಹಿಳೆಯರು ಬುರ್ಕಾ ಹಾಗೂ ಹಿಜಾಬ್ ಧರಿಸಿ ಪಾಲ್ಗೊಂಡಿದ್ದರು. ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಜಬ್ ಧರಿಸಲು ಅವಕಾಶ ನೀಡಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಕಾಲೇಜಿನಲ್ಲಿ ಕೇಸರಿ ಶಾಲು ಹಾಗೂ ನೀಲಿ ಶಾಲು ಧರಿಸಿ ಮುಖಾಮುಖಿಯಾದರು. ನೀಲಿ ಶಾಲು ಧರಿಸಿದವರು ಜೈಭೀಮ್ ಎಂದು ಘೋಷಣೆ ಕೂಗಿದ್ರೆ ಕೇಸರಿ ಶಾಲು ಧರಿಸಿದವರು ಜೈಶ್ರೀರಾಮ್ ಎಂದು ಕೂಗೋದಕ್ಕೆ ಶುರು ಮಾಡಿದ್ರು.