ಸುದ್ದಿಒನ್,ಬೆಂಗಳೂರು,ಮೇ.15: ಕರ್ನಾಟಕದ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಮತ್ತು ಅಬಕಾರಿ ಇಲಾಖೆ ಭರ್ಜರಿ ಕೊಡುಗೆ ನೀಡಿದೆ. ರಾಜ್ಯದ ನೂತನ ಅಬಕಾರಿ ನೀತಿಯ ಅನ್ವಯ, ಪ್ರೀಮಿಯಂ ಬಿಯರ್ ಹಾಗೂ ಸ್ಕಾಚ್ ವಿಸ್ಕಿಗಳ ದರದಲ್ಲಿ ಗಣನೀಯ ಕಡಿತವಾಗಿದ್ದು, ಮೇ 11 ರಿಂದಲೇ ಈ ಹೊಸ ದರಗಳು ಜಾರಿಗೆ ಬಂದಿವೆ.
ಸರ್ಕಾರವು ಈ ಹಿಂದೆ ಜಾರಿಯಲ್ಲಿದ್ದ 16 ತೆರಿಗೆ ಸ್ಲ್ಯಾಬ್ಗಳನ್ನು 8ಕ್ಕೆ ಇಳಿಕೆ ಮಾಡುವ ಮೂಲಕ ಮದ್ಯದ ದರಗಳನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿದೆ. ನೂತನ ‘ಆಲ್ಕೋಹಾಲ್ ಇನ್ ಬೆವರೇಜ್’ (Alcohol in Beverage) ನೀತಿಯಡಿ, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದಾಗಿ ಕಡಿಮೆ ಆಲ್ಕೋಹಾಲ್ ಅಂಶವಿರುವ ಬಿಯರ್ ಮತ್ತು ಐಷಾರಾಮಿ ಸ್ಕಾಚ್ಗಳ ಬೆಲೆ ಇಳಿಕೆಯಾಗಿದೆ.

ಹೊಸ ನೀತಿಯಿಂದ ಬಿಯರ್ ಬೆಲೆಯಲ್ಲಿ ಸರಿಸುಮಾರು ಶೇ. 20 ರಿಂದ 25 ರಷ್ಟು ಇಳಿಕೆಯಾಗಿದೆ. ಪ್ರತಿ ಬಾಟಲಿ ಮೇಲೆ ಗರಿಷ್ಠ 75 ರೂಪಾಯಿವರೆಗೆ ಗ್ರಾಹಕರಿಗೆ ಉಳಿತಾಯವಾಗಲಿದೆ.
ಕಿಂಗ್ಫಿಶರ್ ಪ್ರೀಮಿಯಂ/ಅಲ್ಟ್ರಾ: 650 ಎಂಎಲ್ ಬಾಟಲಿಗಳ ಮೇಲೆ ಸುಮಾರು ₹75 ಕಡಿತ.
ಹೈನೆಕೆನ್: ಪ್ರತಿ ಬಾಟಲಿಯ ಮೇಲೆ ₹70 ರಿಯಾಯಿತಿ.
ಬಡ್ವೈಸರ್ ಮತ್ತು ಯುಬಿ ಎಕ್ಸ್ಪೋರ್ಟ್: ಇವುಗಳ ದರದಲ್ಲಿ ₹20 ರಿಂದ ₹25 ವರೆಗೆ ಇಳಿಕೆ ಕಂಡುಬಂದಿದೆ.
ಪ್ರೀಮಿಯಂ ಸ್ಕಾಚ್ ಮೇಲೆ ₹1,100 ವರೆಗೆ ಲಾಭ!
ಅಂತರಾಷ್ಟ್ರೀಯ ಬ್ರಾಂಡ್ಗಳ ಮದ್ಯ ಸೇವಿಸುವವರಿಗೆ ಇದು ದೊಡ್ಡ ಬಂಪರ್ ಆಫರ್. ಬ್ಲ್ಯಾಕ್ ಲೇಬಲ್ ಮತ್ತು ಶಿವಾಸ್ ರೀಗಲ್ನಂತಹ ಸ್ಕಾಚ್ಗಳ ಬೆಲೆ ಸಾವಿರ ರೂಪಾಯಿಗಿಂತಲೂ ಹೆಚ್ಚು ಇಳಿಕೆಯಾಗಿದೆ.
ಈ ಹಿಂದೆ ₹5,190 ಇದ್ದ 750 ಎಂಎಲ್ ಬಾಟಲಿಯ ಬೆಲೆ ಈಗ ₹4,100 ಕ್ಕೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಒಂದು ಬಾಟಲಿಯ ಮೇಲೆ ಬರೋಬ್ಬರಿ ₹1,090 ರಿಂದ ₹1,100 ವರೆಗೆ ಉಳಿತಾಯವಾಗುತ್ತಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












