ಚಿತ್ರದುರ್ಗ, (ಫೆ.05) : ನಾವು ಮಾಡುವ ಕೆಲಸಗಳಲ್ಲಿ ಪರಿಶ್ರಮದ ಜೊತೆಗೆ ಶ್ರದ್ಧೆ ಇದ್ದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಬಾಲಕೃಷ್ಣ ಹೇಳಿದರು.
ನಗರದ ಮಹೇಶ್ ಮೋಟಾರ್ಸ್ ನಲ್ಲಿ ಆಯೋಜಿಸಿದ್ದ ಶೋರೂಂ ನ 30 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಹಲವರು ಯಶಸ್ವಿಯಾಗುವಲ್ಲಿ ವಿಫಲರಾಗುತ್ತಾರೆ ಆದರೆ ಮಹೇಶ್ ಮೋಟಾರ್ಸ್ ನ ಮಾಲೀಕರಾದ ಸಿ.ಜಿ. ಮಲ್ಲಿಕಾರ್ಜುನಸ್ವಾಮಿ ಅವರ ಸತತವಾದ ಪರಿಶ್ರಮ, ಶ್ರದ್ಧೆ, ಕಾರ್ಯತತ್ಪರತೆ ಹಾಗೂ ಪ್ರಾಮಾಣಿಕತೆಯಿಂದ ಅವರು ಈ ಕ್ಷೇತ್ರದಲ್ಲಿ ಅಮೋಘವಾದ ಯಶಸ್ಸನ್ನು ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿ ಶುಭ ಕೋರಿದರು.
ಶೋರೂಂನ ಮಾಲೀಕರಾದ ಸಿ.ಜಿ. ಮಲ್ಲಿಕಾರ್ಜುನ ಸ್ವಾಮಿ ಮಾತಮಾಡಿ,
1993 ಫೆಬ್ರವರಿ 5 ರಂದು ಚಿಕ್ಕದಾಗಿ ಆರಂಭವಾದ ನಮ್ಮ ಸಂಸ್ಥೆ ಇಂದು ದಕ್ಷಿಣ ಭಾರತದಲ್ಲಿಯೇ ಮಾರಾಟ ಮತ್ತು ಸೇವೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಗ್ರಾಹಕರಿಗೆ ಸಂತೃಪ್ತ ಸೇವೆಯನ್ನು ನೀಡುತ್ತಿದೆ.
ಸುಮಾರು 250 ಕ್ಕೂ ಹೆಚ್ಚು ಸಿಬ್ಬಂದಿಯ ನಿರಂತರ ಪರಿಶ್ರಮದಿಂದ ಬೃಹತ್ತಾಗಿ ಬೆಳೆದು, ಜಿಲ್ಲೆಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸುತ್ತಾ ಗ್ರಾಹಕರ ಮನಸ್ಸಿನಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಈ ಯಶಸ್ಸಿನ ಹಿಂದೆ ನಮ್ಮ ಸಿಬ್ಬಂದಿಯ ಪಾತ್ರ ಹಾಗೂ ಗ್ರಾಹಕರ ವಿಶ್ವಾಸವೇ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.
30 ನೇ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಗ್ರಾಹಕರಿಗಾಗಿ ಫೆಬ್ರವರಿ 1 ರಿಂದ 5 ನೇ ತಾರೀಖಿನವರೆಗೆ ದ್ವಿಚಕ್ರ ವಾಹನ ಖರೀದಿಸಿದ ಮೂವರು ಅದೃಷಶಾಲಿಗಳಿಗೆ 32 ಇಂಚಿನ ಎಲ್ಇಡಿ ಸ್ಮಾರ್ಟ್ ಟಿವಿ, ಮೊದಲ 100 ಗ್ರಾಹಕರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಹಾಗೂ HERO EXTREME 160 R ವಾಹನ ಖರೀದಿಸಿದವರಿಗೆ ಹತ್ತು ಸಾವಿರ ರೂಪಾಯಿ ವಿಶೇಷ ರಿಯಾಯಿತಿಯನ್ನು ಉಡುಗೊರೆಯಾಗಿ ನೀಡಲಾಗಿದೆ.
ಇಂದು ನಡೆದ ಲಕ್ಕಿ ಡ್ರಾ ನಲ್ಲಿ 32 ಇಂಚಿನ ಟಿವಿ ಪಡೆದ ಮೂರು ಜನ ಅದೃಷ್ಟಶಾಲಿಗಳು
1. ಗಾದ್ರೆಪ್ಪೆ, ನಾಯಕನಹಟ್ಟಿ
2. ಪ್ರಭುಲಿಂಗ ಸ್ವಾಮಿ, ಚಿತ್ರದುರ್ಗ
3. ಮಧು, ಚಳ್ಳಕೆರೆ
ಈ ಸಂದರ್ಭದಲ್ಲಿ ಮಹೇಶ್ ಮೋಟರ್ಸ್ ಮಾಲೀಕರ ಪುತ್ರ ಎಂ.ಜಿ.ಮಹೇಂದ್ರ ಶೋರೂಂನ ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಹಾಜರಿದ್ದರು.