ನವದೆಹಲಿ: ಉಧನ್ ಸಿಂಗ್ ನಗರದ ಕಿಚ್ಚಾದಲ್ಲಿ ಕಿಸಾನ್ ಸ್ವಾಭಿಮಾನ್ ಸಂವಾದ ರ್ಯಾಲಿಯಲ್ಲಿ ಇಂದು ರಾಹುಲ್ ಗಾಂಧಿ ಭಾಗಿಯಾಗಿದ್ದರು. ಆ ವೇಳೆ ಪ್ರಧಾನಮಂತ್ರಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊರಿನಾ ಸಮಯದಲ್ಲೇ ಪ್ರಧಾನಿ ಮೋದಿ ರೈತರನ್ನ ಒಂದು ವರ್ಷ ಬೀದಿಗೆ ಬಿಟ್ಟಿದ್ದರು. ಆದ್ರೆ ಕಾಂಗ್ರೆಸ್ ಯಾವತ್ತಿಗೂ ಆ ರೀತಿ ಮಾಡಲ್ಲ ಎಂದಿದ್ದಾರೆ.
ಒಬ್ಬ ಪ್ರಧಾನಿ ಎಲ್ಲರಿಗಾಗಿ ಕೆಲಸ ಮಾಡದೆ ಇದ್ದರೆ ಅವರು ಹೇಗೆ ಪ್ರಧಾನಿಯಾಗಲು ಸಾಧ್ಯ. ಆ ಪ್ರಕಾರ ಅವರು ಪ್ರಧಾನಿಯಲ್ಲ. ರಾಜನು ನಿರ್ಧಾರ ತೆಗೆದುಕೊಳ್ಳುವಾಗ ಯಾರು ಮಾತನಾಡಬಾರದು. ನೋಡಿಕೊಂಡು ಸುಮ್ಮನಿರಬೇಕು ಎಂದು ನಂಬುವ ರಾಜನಿದ್ದಾನೆ. ಮೋದಿ ಸರ್ಕಾರ ಮಾಡಿದ ರೀತಿಯಲ್ಲಿ ಎಂದಿಗೂ ನಮ್ಮ ಒಕ್ಷ ನಡೆದುಕೊಳ್ಳುವುದಿಲ್ಲ ಎಂದು ಮೋದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷ ಎಂದಿಗೂ ರೈತರು, ಬಡವರು ಮತ್ತು ಕಾರ್ಮಿಕರ ಪರವಾಗಿದೆ. ಇಂದು ಎರಡು ರಾಷ್ಟ್ರಗಳಿವೆ ಒಂದು ಶ್ರೀಮಂತರಿಗೆ ಮತ್ತೊಂದು ಬಡವರಿಗೆ. ರೈತರು ಮೂರು ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿ 1 ವರ್ಷ ಪ್ರತಿಭಟನೆಯನ್ನು ಮಾಡಿದರು. ಆದರೆ ನಮ್ಮ ಸರ್ಕಾರ ಈ ರೀತಿ ಮಾಡಿಲ್ಲ, ಮಾಡುವುದು ಇಲ್ಲ. ನಾವು ಜನರ ಪರ ಎಂದು ಒತ್ತಿ ಹೇಳಿದರು.