Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿಕ್ಷಣ, ಸಂಘಟನೆ, ಹೋರಾಟದಿಂದ ಜಾಗೃತರಾಗಿ : ಬಸವನಾಗಿದೇವ ಸ್ವಾಮೀಜಿ

Facebook
Twitter
Telegram
WhatsApp

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ: ಹೆಣ್ಣು ಅಲ್ಲ, ಗಂಡು ಅಲ್ಲ. ಎನ್ನುವ ಕೀಳರಿಮೆಯನ್ನು ಮನಸ್ಸಿನಿಂದ ತೆಗೆದು ಹಾಕಿ ಸಂವಿಧಾನಬದ್ದವಾಗಿರುವ ಶಿಕ್ಷಣ, ಸಂಘಟನೆ, ಹೋರಾಟದಿಂದ ಜಾಗೃತರಾಗಿ ಎಂದು ಲೈಂಗಿಕ ಅಲ್ಪಸಂಖ್ಯಾತರಿಗೆ ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮೀಜಿ ಕರೆ ನೀಡಿದರು.

ಲೆಶ್, ಅನೇಕ ಸಂಸ್ಥೆ-ಬೆಂಗಳೂರು, ವಾಹಿನಿ ಸಮುದಾಯ ಸಂಸ್ಥೆ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ಐಶ್ವರ್ಯ ಫೋರ್ಟ್‍ನಲ್ಲಿ ಶನಿವಾರ ನಡೆದ ಧರ್ಮ ಮತ್ತು ಲಿಂಗತ್ವ/ಲೈಂಗಿಕತೆ ಕುರಿತ ವಿಚಾರ ಸಂಕಿರಣದ ಸಾನಿಧ್ಯ ವಹಿಸಿ ಮಾತನಾಡಿದ ಬಸವನಾಗಿದೇವಸ್ವಾಮಿ, ರೂಪ ಯಾವುದೇ ಇದ್ದರೂ ಒಳಗಿನ ಮನಸ್ಸು ಒಂದೆ ಆಗಿರುತ್ತದೆ. ಅದಕ್ಕಾಗಿ ವೈದ್ಯಕೀಯ ಆಪ್ತ ಸಮಾಲೋಚನೆ ನಡೆಸಿದಾಗ ಎಲ್ಲರಂತೆ ನೀವುಗಳು ಸಮಾಜದ ಮುಖ್ಯವಾಹಿನಿಗೆ ಬರಬಹುದು.

ಮಂಗಳಮುಖಿ ಎನ್ನುವುದು ಪ್ರಕೃತಿದತ್ತ, ಸ್ವಾಭಾವಿಕವಾದುದು. ಅದಕ್ಕಾಗಿ ಯಾರು ಮುಜುಗರಪಟ್ಟುಕೊಳ್ಳುವುದು ಬೇಡ. ಗೊಂದಲದಿಂದ ಮೊದಲು ಹೊರಬನ್ನಿ. ವಿಧಾನಸಭೆ ಮತ್ತು ಪಾರ್ಲಿಮೆಂಟ್‍ಗಳಿಗೂ ನೀವುಗಳು ಪ್ರವೇಶ ಮಾಡುವಷ್ಟು ಸೌಲಭ್ಯಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಪವಿತ್ರವಾದ ಮತದಾನವನ್ನು ಸೀರೆ, ಪಂಚೆ, ಹಣ, ಹೆಂಡಕ್ಕೆ ಮಾರಿಕೊಳ್ಳಬಾರದು ಎಂದು ಹೇಳಿದರು.

ದೇಶದಲ್ಲಿ ಶೇ.2 ರಷ್ಟಿರುವವರು ನಮ್ಮ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದ್ದರೂ ಪ್ರಶ್ನೆ ಮಾಡದಂತಾಗಿರುವುದು ನೋವಿನ ಸಂಗತಿ. ರಾಮಾಯಣ, ಮಹಾಭಾರತ, ಯೋಗ, ಧ್ಯಾನ, ತಪಸ್ಸು ಇವುಗಳೆಲ್ಲವನ್ನು ನಮ್ಮಿಂದ ಕಬಳಿಸಿ ಧರ್ಮ, ದೇವರು, ಜಾತಿಯೆಂಬ ಶೋಷಣೆ ಮಾಡಿಕೊಂಡು ಬಹುಸಂಖ್ಯಾತರಿಗೆ ಅನ್ಯಾಯ ಮಾಡುತ್ತಿರುವುದರ ವಿರುದ್ದ ಮೊದಲು ಎಚ್ಚರಗೊಳ್ಳಬೇಕು.

ಸಂವಿಧಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಮತವನ್ನು ಮನುವಾದಿಗಳಿಗೆ ಹಾಕಿ ಅನ್ಯಾಯಕ್ಕೊಳಗಾಗುತ್ತಿದ್ದೇವೆ. ಹಾಗಾಗಿ ಎಲ್ಲರೂ  ಸಂಘಟಿತರಾಗೋಣ ಎಂದು ತಿಳಿಸಿದರು.

ಕ್ರೈಸ್ತ ಕಮಿಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೊಲೆಮಾನ್ ರಾಜ್‍ಕುಮಾರ್ ಮಾತನಾಡಿ ದೇವರು ಮನುಷ್ಯನನ್ನು ನೆಲದ ಮಣ್ಣನಿಂದ ಸೃಷ್ಟಿಸಿದ್ದಾನೆಂದು ಬೈಬಲ್ ಹೇಳಿದೆ. ಮಣ್ಣಿನಲ್ಲಿರುವ ಎಲ್ಲಾ ಅಂಶ ಮಾನವನ ದೇಹದಲ್ಲಿದೆ. ಪ್ರತಿಯೊಬ್ಬರ ಮನಸ್ಸು ಒಳಿತಿಗಾಗಿ ಹಾತೊರೆಯಬೇಕು.

ನೆರೆಹೊರೆಯವರನ್ನು ಪ್ರೀತಿಸಿ ಎನ್ನುವ ಸಂದೇಶವನ್ನು ಏಸುಕ್ರಿಸ್ತನು ಜಗತ್ತಿಗೆ ಸಾರಿದ್ದಾನೆ. ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕತೆಯಲ್ಲಿ ತಾರತಮ್ಯವಿದೆ. ನಾವು ಮಾಡಿದ ತಪ್ಪನ್ನು ದೇವರು ಕ್ಷಮಿಸಬೇಕಾದರೆ ಮತ್ತೊಬ್ಬರ ತಪ್ಪುಗಳನ್ನು ನಾವುಗಳು ಕ್ಷಮಿಸಬೇಕು. ಎಲ್ಲಿಯಾದರೂ ನಿಮಗೆ ಅನ್ಯಾಯವಾದರೆ ಖಂಡಿತವಾಗಿಯೂ ಭಾರತೀಯ ಕ್ರಸ್ತ ಒಕ್ಕೂಟದಿಂದ ಧ್ವನಿ ಎತ್ತುವುದಾಗಿ ಲೈಂಗಿಕ ಅಲ್ಪಸಂಖ್ಯಾತರಿಗೆ ಭರವಸೆ ನೀಡಿದರು.

ಸತ್ಯ ಸಂದೇಶ ಅಧ್ಯಕ್ಷ ಮಹಮದ್ ನೂರುಲ್ಲಾ ಮಾತನಾಡುತ್ತ ಒಂದು ಧರ್ಮ ಮತ್ತೊಂದು ಧರ್ಮವನ್ನು ದ್ವೇಷಿಸುವ ಕೆಲಸವಾಗುತ್ತಿರುವುದು ಸರಿಯಲ್ಲ. ಎಲ್ಲರೂ ಸಮಾನರು ಯಾರೂ ಮೇಲು-ಕೀಳಲ್ಲ.

ಮಂಗಳಮುಖಿಯರು ಕೂಡ ದೈವನ ಸೃಷ್ಟಿಯಾಗಿರುವುದರಿಂದ ಅವರನ್ನು ಯಾರು ಹೀಯಾಳಿಸಿ ದೂರ ಮಾಡಬಾರದು. ಎಲ್ಲರಂತೆ ಅವರಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳುವುದು ಒಳ್ಳೆಯದು. ಎಲ್ಲಾ ರಂಗದಲ್ಲಿಯೂ ಮಂಗಳಮುಖಿಯರ ಕೊಡುಗೆ ಅಪಾರವಾಗಿರಬೇಕು ಎಂದು ಸಲಹೆ ನೀಡಿದರು.

ಸಮ ಸಮಾಜ ವೇದಿಕೆಯ ಮಹಮದ್ ಜಬೀವುಲ್ಲಾ ಮಾತನಾಡಿ ಮಂಗಳಮುಖಿಯರು ಎಲ್ಲೆಂದರಲ್ಲಿ ಭಿಕ್ಷೆ ಬೇಡುವುದನ್ನು ನಿಲ್ಲಿಸಬೇಕು. ವಿಧಾನಸಭೆ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಂವಿಧಾನಬದ್ದವಾಗಿ ನಿಮಗೂ ಇದೆ. ಅದಕ್ಕಾಗಿ ರಾಜಕಾರಣದಲ್ಲಿ ಅಧಿಕಾರ ಹಿಡಿದರೆ ಮಂಗಳಮುಖಿಯರ ಕಷ್ಟ-ಸುಖಗಳಿಗೆ ಸ್ಪಂದಿಸಬಹುದು. ಲೈಂಗಿಕ ಅಲ್ಪಸಂಖ್ಯಾತರೆಂಬ ಕೀಳರಿಮೆಯಿಂದ ಹೊರ ಬನ್ನಿ. ಸದಾ ನಿಮ್ಮ ಜೊತೆಗೆ ನಾವುಗಳಿರುತ್ತೇವೆಂದು ಹೇಳಿದರು.

ಜನಶಕ್ತಿ ಸಂಘಟನೆ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಮಾತನಾಡುತ್ತ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದತ್ತವಾಗಿ ಸಿಗುವ ಹಕ್ಕು ಅಲ್ಪಸಂಖ್ಯಾತರು, ಶೋಷಿತರು, ತಳಸಮುದಾಯದವರು, ಲೈಂಗಿಕ ಅಲ್ಪಸಂಖ್ಯಾತರಿಗೂ ದೊರಕಬೇಕು.

ನಿಜಾಮರ ಆಸ್ಥಾನದಲ್ಲಿ ಮಂಗಳಮುಖಿಯರಿಗೆ ವಿಶೇಷವಾದ ಗೌರವವಿತ್ತು. ಯಾರ ವಿರುದ್ದ, ಯಾರ ಜೊತೆಯಲ್ಲಿರಬೇಕೆಂಬುದನ್ನು ಮೊದಲು ನಾವು ನೀವುಗಳೆಲ್ಲಾ ತಿಳಿದುಕೊಳ್ಳಬೇಕು. ಅದಕ್ಕಾಗಿ ಸಂಘಟನೆಯಾಗಬೇಕೆಂದು ತಾಕೀತು ಮಾಡಿದರು.

ವಾಹಿನಿ ಸಮುದಾಯ ಸಂಸ್ಥೆ ಅಧ್ಯಕ್ಷೆ ಜಿ.ವೀಣ ಮಾತನಾಡಿ ಲೈಂಗಿಕತೆ ಎನ್ನುವುದು ಹೊಸದೇನಲ್ಲ. ಪ್ರಕೃತಿದತ್ತವಾದುದು. ಅದಕ್ಕಾಗಿ ಲೈಂಗಿಕತೆ ಎಂದರೆ ದೊಡ್ಡ ಅಪರಾಧವೆಂಬಂತೆ ನೋಡಬಾರದು.

ಹಲವು ಕಡೆ ದೊಡ್ಡ ದೊಡ್ಡ ದೇವಸ್ಥಾನಗಳ ಗೋಪುರಗಳ ಮೇಲೆ ಲೈಂಗಿಕತೆಯ ಭಂಗಿಯ ಆಕಾರಗಳ ಗೊಂಬೆಗಳು ಈಗಲೂ ಇವೆ. ಅದನ್ನು ನೋಡಿ ಮೂಗು ಮುರಿಯುವವರಿದ್ದಾರೆ. ಕೆಲವು ಲೈಂಗಿಕ ಅಲ್ಪಸಂಖ್ಯಾತರು ಧೈರ್ಯವಾಗಿ ಹೊರ ಬಂದು ಸಮಾಜದಲ್ಲಿ ಬೆರೆಯುತ್ತಾರೆ.

ಇನ್ನು ಕೆಲವು ಪ್ಯಾಂಟ್‍ಗಳನ್ನು ಧರಿಸಿರುವ ಲೈಂಗಿಕ ಅಲ್ಪಸಂಖ್ಯಾತರು ಮನೆಯಿಂದ ಹೊರಗೆ ಬರಲು ಮುಜುಗರ ಪಟ್ಟುಕೊಳ್ಳುತ್ತಿದ್ದಾರೆ. ಎಲ್ಲಿ ಯಾರಾದರೂ ನಮ್ಮನ್ನು ಕೇವಲವಾಗಿ ಕಾಣುತ್ತಾರೋ ಎನ್ನುವ ಭಯ ಅವರದು. ಎಲ್ಲರಂತೆ ಸಮಾಜದ ಮುಖ್ಯ ವಾಹಿನಿಗೆ ಬಂದು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಮಂಗಳಮುಖಿಯರಿಗೆ ತಿಳಿ ಹೇಳಿದರು.

ಮಲ್ಲು ಕುಂಬಾರ, ನಾಗರಾಜ್ ಇನ್ನು ಮುಂತಾದವರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂರನೇ ಬಾರಿಗೆ ಸೋತ ನಿಖಿಲ್ ಕುಮಾರಸ್ವಾಮಿ…!

ಸುದ್ದಿಒನ್ | ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಜೊತೆಗೆ ದೇಶಾದ್ಯಂತ ವಿವಿಧ ರಾಜ್ಯಗಳ 48 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಕರ್ನಾಟಕದಲ್ಲಿ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ

ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್

ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದಿಂದ ಗೆಲುವು : ಬಿಜೆಪಿ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್

ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು

error: Content is protected !!