ಬಾಗಲಕೋಟೆ: ಆಧುನಿಕ ಸೂಫಿಸಂತ ಇಬ್ರಾಹಿಂ ಎನ್ ಸುತಾರ್ ಇಂದು ನಿಧನರಾಗಿದ್ದಾರೆ. ಇವರಿಗೆ 82 ವರ್ಷವಾಗಿತ್ತು. ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಬ್ರಾಹಿಂ ಅವರು ಭಾವೈಕ್ಯತೆಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದವರು. ಪದ್ಮಶ್ರೀ ಪುರಸ್ಕೃತರು ಕೂಡ. ಮೇ 10, 1940ರಲ್ಲಿ ಜನಿಸಿದ ಇವರು, ವೈದಿಕ, ವಚನ, ಸೂಫಿ ಪರಂಪರೆಗಳನ್ನ ಕುರಿತು ಭಜನೆ, ಪ್ರವಚನ, ಸಂವಾದಗಳನ್ನ ಮಾಡುತ್ತಿದ್ದವರು. ಅದರಿಂದಲೇ ಇವರು ಸಾಕಷ್ಟು ಖ್ಯಾತಿ ಗಳಿಸಿದ್ದವರು.
ಕನ್ನಡದ ಕಬೀರ ಎಂದೇ ಹೆಸರು ಮಾಡಿದ್ದವರು. ಯಾವುದೇ ಕಾರ್ಯಕ್ರಮ ಮಾಡಿದ್ರು ಕೂಡ ಆ ಮೂಲಕ ಭಾವೈಕ್ಯತೆಯನ್ನೇ ಸಾರುತ್ತಿದ್ದವರು. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದ್ದರಿಂದ ಮೂರನೇ ತರಗತಿವರೆಗೆ ಮಾತ್ರ ಓದಿದ್ದರು. ನೇಕಾರಿಕೆ ಕಲಿತು ಜೀವನ ನಡೆಸುತ್ತಿದ್ದರು. ಕುರಾನ್ ಅಧ್ಯನ ಮಾಡಿದರು. ಬೇರೆ ಧರ್ಮಗಳನ್ನ ತಿಳಿಯುತ್ತಿದ್ದರು. ಭಜನಾಸಂಘಗಳಲ್ಲಿ ಭಾಗವಹಿಸಿ ವಚನ, ತತ್ವಪದಗಳನ್ನೆಲ್ಲಾ ಕಲಿತರು. ಆ ಮೂಲಕವೆರ ಭಾವೈಕ್ಯತೆಯನ್ನ ಸಾರುತ್ತಿದ್ದರು. ಆದ್ರೆ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.