ನವದೆಹಲಿ: ಪ್ರಧಾನಿ ಮೋದಿಯವರ ಕಚೇರಿಗೆ ನೋಟೀಸ್ ಒಂದು ಬಂದಿದೆ. ಅದು ಮೋದಿಯವರು ಧರಿಸಿದ್ದ ಸಮವಸ್ತ್ರದ ವಿಚಾರಕ್ಕೆ. ಸೇನಾ ಸಮವಸ್ತ್ರ ಧರಿಸೋದು ಶಿಕ್ಷಾರ್ಹ ಅಪರಾಧವೆಂದು ಈ ನೋಟಿಸ್ ನೀಡಲಾಗಿದೆ.
ಕಳೆದ ಬಾರಿ ಪ್ರಧಾನಿ ಅವರು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆಗ ಸೇನಾ ಸಮವಸ್ತ್ರ ಧರಿಸಿ, ಯೋಧರ ಜೊತೆ ದೀಪಾವಳಿ ಹಬ್ಬವನ್ನ ಆಚರಣೆ ಮಾಡಿದ್ರು. ಈಗ ಇದೇ ವಿಚಾರಕ್ಕೆ ಪ್ರಧಾನಿ ಮೋದಿ ಅವರಿಗೆ ನೋಟೀಸ್ ನೀಡಲಾಗಿದೆ. ಉತ್ತರಪ್ರದೇಶದ ಜಿಲ್ಲಾ ಸತ್ರ ನ್ಯಾಯಾಲಯ ಈ ನೋಟೀಸ್ ನೀಡಿದೆ.
ಐಪಿಸಿ ಸೆಕ್ಷನ್ 140 ಅಡಿಯಲ್ಲಿ ಸೇನಾ ಸಮವಸ್ತ್ರ ಧರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಭಾರತೀಯ ದಂಡಸಂಹಿತೆ 140 ಪ್ರಕಾರ, ಸೈನಿಕರು, ನಾವಿಕರು, ವಾಯು ಸೇನಾ ಸಿಬ್ಬಂದಿ ಬಳಸುವ ಸಮವಸ್ತ್ರವನ್ನ ಧರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ಈ ಸಂಬಂಧ ವಕೀಲ ರಾಕೇಶ್ ಪಾಂಡೆ ಎಂಬುವವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮೋದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದರು. ಈ ಸಂಬಂಧ ಈಗಾಗಲೇ ಮೋದಿ ಅವರ ಕಚೇರಿಗೆ ನೋಟೀಸ್ ನೀಡಲಾಗಿದೆ. ಇನ್ನು ಮಾರ್ಚ್ 2 ರಂದು ಈ ಬಗ್ಗೆ ವಿಚಾರಣೆ ನಡೆಯಲಿದೆ.