ಬೆಂಗಳೂರು: ಹಿಜಾಬ್ ವರ್ಸಸ್ ಕೇಸರಿ ಶಾಲು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೇಸರ ಹೊರಹಾಕಿದ್ದಾರೆ. ಹೆಣ್ಣುಮಕ್ಕಳನ್ನ ಹಾಗೇ ಗೇಟಿನ ಆಚೆ ನಿಲ್ಲಿಸುವುದಿ ಅಮಾನವೀಯ ಘಟನೆ ಎಂದಿದ್ದಾರೆ.
ಹಿಜಬ್ ಧರಿಸುವುದು ಅವರ ಮೂಲಭೂತ ಹಕ್ಕು. ಸಾಕಷ್ಟು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಸಮವಸ್ತ್ರ ಕಡ್ಡಾಯ ಅಂತ ಸರ್ಕಾರ ಎಲ್ಲಿಯೂ ಮಾಡಿಲ್ಲ. ಅದು ಸರ್ಕಾರಿ ಕಾಲೇಜು. ಆ ಕಾಲೇಜಿನಲ್ಲಿ ಗೇಟ್ ಹಾಕಿ ಪ್ರಾಂಶುಪಾಲರು ಒಳಗೆ ಬಿಟ್ಟಿಲ್ಲ. ಮೂಲಭೂತಿನ ಹಕ್ಕಿನ ಉಲ್ಲಂಘನೆಯಾಗಿದೆ.
ಅವನ್ಯಾವನೋ ಶಾಸಕ ರಘುಪತಿ ಭಟ್ ಅಂತೆ. ಆತ ಹೇಳಿದನಂತೆ ಇವನು ತಡೆದನಂತೆ. ಅವನು ಯಾರು ಹೇಳೋಕೆ ಯೂನಿಫಾರ್ಮ್ ತನ್ನಿ ಅಂತ. ಇದು ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ತಡೆಯುವ ಯತ್ನವಾಗಿದೆ. ಈ ಬೆಳವಣಿಗೆ ಸಂವಿಧಾನದ ವಿರೋಧಿ ನಡೆ. ಕೇಸರಿ ಶಾಲು ಹಾಕಿಕೊಂಡು ಬಂದಿದ್ದರ ಉದ್ದೇಶವಾದರೂ ಏನಿತ್ತು..? ಮೊದಲು ಆ ಪ್ರಿನ್ಸಿಪಾಲರನ್ನ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.