ಉಡುಪಿ: ಕಳೆದ ಒಂದೂವರೆ ತಿಂಗಳಿಂದ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರ ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಭಾರೀ ಸದ್ದು ಮಾಡ್ತಿದೆ. ದಿನ ಕಳೆದಂತೆ ಹೆಚ್ಚಾಗುತ್ತಿದೆಯೇ ವಿನಃ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇನ್ನು ಸರ್ಕಾರಿ ಆದೇಶಗಳನ್ನು ಪಾಲಿಸದೇ ಸಮವಸ್ತ್ರ ಧರಿಸದೇ ಇದ್ದವರನ್ನ ಡಿಬಾರ್ ಮಾಡಲಾಗುತ್ತೆ ಎಂದು ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆರು ಜನ ವಿದ್ಯಾರ್ಥಿಗಳು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಮೂವತ್ತು ವರ್ಷದಿಂದ ಯಾವುದೇ ತಾರತಮ್ಯ ಮಾಡಿಲ್ಲ. ಆದ್ರೆ ಸರ್ಕಾರದ ನಿಯಮವನ್ನ ಎಲ್ಲರೂ ಪಾಲನೇ ಮಾಡಲೇಬೇಕು. ಆಡಳಿತ ಮಂಡಳಿಯ ಸದಸ್ಯನಾಗಿ ಈವರೆಗೆ ಚರ್ಚೆ ಮಾಡಿದ್ದೇನೆ. ಸರ್ಕಾರದ ಆದೇಶದಲ್ಲಿ ಯಾವುದೇ ರಾಜಿ ಇಲ್ಲ.
ಕಾಲೇಜಿನಲ್ಲಿ ಶೈಕ್ಷಣಿಕ ಕೊರತೆಯಿದ್ದರೆ ನೀಗಿಸುತ್ತೇವೆ. ಆದರೆ ಈ ರೀತಿ ನಡೆ ಸಲ್ಲದು. ಸರ್ಕಾರ ಸಮವಸ್ತ್ರ ಕಡ್ಡಾಯ ಮಾಡಿದೆ. ಹೀಗಾಗಿ ಸಮವಸ್ತ್ರ ಧರಿಸಿಯೇ ಬರಬೇಕು ಎಂದಿದ್ದಾರೆ. ಸಮವಸ್ತ್ರ ಧರಿಸದೇ ಇದ್ದರೇ ಡಿಬಾರ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.