ಗದಗ: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಹದಿನೇಳು ಜನ ಹೊರ ಹೋಗಿದ್ದರು. ಬಿಜೆಪಿ ಸರ್ಕಾರದಲ್ಲಿದ್ದರು ಅವರ ಬಗ್ಗೆ ಆಗಾಗ ವಲಸಿಗರು ಎಂಬ ಪದ ಕೇಳಿಸುತ್ತಲೇ ಇರುತ್ತೆ. ಈ ಬಗ್ಗೆ ವಲಸಿಗ ಸಚಿವರು ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಈ ಬಗ್ಗೆ ಬಿ ಸಿ ಪಾಟೀಲ್ ಮಾತನಾಡಿದ್ದು, ನಾವೂ ಸೊಸೆಯಾಗಿ ಬಂದವರು ಈಗ ಮಗಳಾಗಿದ್ದೇವೆ ಎಂದಿದ್ದಾರೆ.
ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆಯೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಮಾತನಾಡಿದ ಅವರು, ನಾವ್ಯಾಕೆ ಅಲ್ಲಿಗೆ ಹೋಗೋಣಾ. ಬಿಜೆಪಿ ಮನೆಗೆ ಸೊಸೆಯಾಗಿ ಬಂದಿದ್ದೇವೆ. ಈಗ ಮಗಳಾಗಿದ್ದೇವೆ. ಕಾಂಗ್ರೆಸ್ ನವರಿಗೆ ಬಿಜೆಪಿ ಮೇಲೆ ಅಷ್ಟು ಯಾಕೆ ಮಮಕಾರ. ಕಾಂಗ್ರೆಸ್ ತಳಪಾಯ ಕುಸಿತವಾಗಿದೆ. ಅದಕ್ಕೆ ಬೇರೆ ಪಕ್ಷದವರನ್ನ ಕರೆ ತಂದು ಟಿಕೆಟ್ ನೀಡುತ್ತಿದ್ದಾರೆ. ಕಾಂಗ್ರೆಸ್ ಗೆ ಮತ್ತೆ ಸಹಕರಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಇನ್ನು ಇದೇ ವೇಳೆ ಸಿಎಂ ಬದಲಾವಣೆ ವಿಚಾರ ಮಾತನಾಡಿದ್ದು, ಸಿಎಂ ಬದಲಾವಣೆ ಸಾಧ್ಯವೇ ಇಲ್ಲ. ಹೈಕಮಾಂಡ್ ಹೇಳಿದಂತೆ ಮುಂದಿನ ಚುನಾವಣೆವರೆಗೂ ಬಸವರಾಜ್ ಬೊಮ್ಮಾಯಿ ಅವರೇ ಇರ್ತಾರೆ. ಆರು ತಿಂಗಳಷ್ಟೇ ಎಂದು ಕಾಂಗ್ರೆಸ್ ನವರಿಗೆ ಯಾರಾದ್ರೂ ಬರೆದುಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.