ಬೆಂಗಳೂರು: ಕಳೆದ ಕೆಲವು ದಿನಗಳಿಂದಲೂ ಈ ಹಿಜಾಬ್ ದರಿಸುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಲೆ ಇದೆ. ಉಡಿಪಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಮುಸ್ಲಿಂ ಹೆಣ್ಣು ಮಕ್ಕಳು ಬಂದರೆ ನಾವೂ ಕೇಸರಿ ಶಾಲು ಧರಿಸಿ ಬರುತ್ತೇವೆಂದು ಹಠ ಶುರುವಾಗಿದೆ. ಇದೀಗ ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿದ್ದು, ಹಿಜಾಬು ಧರಿಸುವ ಹಾಗಿಲ್ಲ, ಶಾಲು ಧರಿಸುವ ಹಾಗಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಕ್ರಮವಹಿಸಬೇಕಿದೆ. ಧರ್ಮ ಆಚರಣೆ ಮಾಡಲು ಶಾಲಾ ಕಾಲೇಜುಗಳಿಲ್ಲ. ಧರ್ಮದ ಪೂಜೆ ಮಾಡೋದಕ್ಕೆ ದೇವಸ್ಥಾನ, ಮಸೀದಿ ಇದೆ. ಅಲ್ಲಿ ಹೋಗಿ ಬೇಕಾದರೆ ಅದನ್ನು ಮಾಡಲಿ. ಶಾಲಾ ಕಾಲೇಜು ಆವರಣದಲ್ಲಿ ಈ ಸಂಘರ್ಷ ಬೇಡವೆಂದಿದ್ದಾರೆ.
ಶಾಲೆಯಲ್ಲಿ ಎಲ್ಲರೂ ಒಂದೇ ಭಾವನೆ ಹೊಂದಿರಬೇಕು. ಹಿಜಾಬ್ ಧರಿಸೋದು, ಶಾಲು ಧರಿಸೋದು ಬೇಡ. ಸಮವಸ್ತ್ರ ಕಡ್ಡಾಯವೆಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ಎಲ್ಲರೂ ಸೇರಿ ಭಾರತ ಮಾತೆಯ ಮಕ್ಕಳಂತೆ ವ್ಯಾಸಂಗ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಲಹೆ ನೀಡಿದ್ದಾರೆ.