ತುಮಕೂರು: ಜಿಲ್ಲೆಯಲ್ಲಿ 43 ಜನ KSRTC ಸಿಬ್ಬಂದಿ ಕೆಲಸ ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲೇ ಕೊರೊನಾ ಸಂಕಷ್ಟ ಕಾಲ. ಈಗ ತಾನೇ ಚೇತರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆಯೇ ಅವರನ್ನ ಕೆಲಸದಿಂದ ವಜಾ ಮಾಡಿರುವುದು ಅವರಿಗೆ ಧಿಕ್ಕೆ ತೋಚದಂತಾಗಿದೆ.
ತುಮಕೂರು ಸಾರಿಗೆ ವಿಭಾಗದಲ್ಲಿ 43 ಡ್ರೈವರ್ ಹಾಗೂ ಚಾಲಕರನ್ನ ಕೆಲಸದಿಂದ ಸಂಸ್ಥೆ ವಜಾ ಮಾಡಲಾಗಿದೆ. ಇದಕ್ಕೆ ಕಾರಣ ಕರ್ತವ್ಯ ಲೋಪದ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ 20 ನೌಕರರನ್ನು ಅಮಾನತು ಕೂಡ ಮಾಡಲಾಗಿದೆ. ಇದು ಕೊರೊನಾ ಸಂಕಷ್ಟದ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ತುಮಕೂರಿನ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ಮಧ್ಯವರ್ತಿಗಳ ಮೂಲಕ ಹಣ ಸಂಗ್ರಹ ಮಾಡ್ತಾ ಇದ್ದಾರೆ ಎಂಬ ಆರೋಪವೂ ಇದೆ. ವಜಾ ಆಗಿರುವವರು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು 10-20 ಸಾವಿರ ಲಂಚ ಕೇಳುತ್ತಿದ್ದಾರೆಂದು ಆರೋಪ ಕೂಡ ಕೇಳಿ ಬರ್ತಾ ಇದೆ. ನೌಕರರ ಮೇಲಿರುವ ಆರೋಪದ ಮೇಲೆ ತನಿಖೆ ನಡೆಸದೆ ದಿಢೀರನೆ ತೆಗೆದಿರುವುದು ಏಕಪಕ್ಷೀಯ ನಿರ್ದಾರ ಎಂದು ಆರೋಪಿಸಲಾಗಿದೆ.