ಬೆಂಗಳೂರು: ಇಂದು ಕೇಂದ್ರ ಸರ್ಕಾರದ 2022-23 ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಈ ಬಜೆಟ್ ಮಂಡನೆ ಮಾಡಿದ್ದಾರೆ. ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿ ಮಲಗಿಸಿದಂತೆ ಇದೆ ಈ ಬಜೆಟ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಜನರ ಪಾಲಿಗೆ ಭರವಸೆಯ ಆಶಾಕಿರಣವಾಗಬೇಕಿತ್ತು ಈ ಕೇಂದ್ರ ಬಜೆಟ್. ಆದ್ರೆ ಅಂತ ಅಂಶ ಇದೆಲ್ಲಿ ಯಾವುದು ಇಲ್ಲ. ಜನ ಸಾಮಾನ್ಯರ ಬದುಕಿನ ಬಗ್ಗೆ ಈ ಬಜೆಟ್ ನಲ್ಲಿ ಕೊಂಚವೂ ಯೋಚನೆ ಮಾಡಿಲ್ಲ. ಕೊರೊನಾ, ಬೆಲೆ ಏರಿಕೆಯಿಂದ ಜನ ಸುಸ್ತಾಗಿ ಹೋಗಿದ್ದಾರೆ. ಆದ್ರೆ ಅದ್ಯಾವುದರ ಬಗ್ಗೆಯೂ ಕೇಂದ್ರ ಸರ್ಕಾರ ಯೋಚನೆಯನ್ನು ಮಾಡಿಲ್ಲ.
ರೈತರನ್ನು, ಕಾರ್ಮಿಕರನ್ನು ಮೇಲೆತ್ತುವ ಬಜೆಟ್ ಇದಾಗಬೇಕಿತ್ತು. ಆದ್ರೆ ಅವರು ಯಾರನ್ನು ನೆನಪಿನಲ್ಲಿ ಇಟ್ಟುಕೊಂಡಂತೆ ಕಂಡಿಲ್ಲ. ಬಡವೆಉ ಬಡವರಾಗಿಯೇ ಉಳಿಯುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಜೆಟ್ ಬಗ್ಗೆ ದೊಡ್ಡ ಮಟ್ಟಿಗೆ ಹೇಳುವಂತಹದ್ದು ಏನೂ ಇಲ್ಲ. ಹಸಿದವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಿ ಎಂದು ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆಂದು ವ್ಯಂಗ್ಯವಾಡಿದ್ದಾರೆ.