ಬೆಂಗಳೂರು : ಸಚಿವ ಆನಂದ್ ಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದರ ಜೊತೆಗೆ ಬಿಜೆಪಿಗೆ ತಲೆ ಬಿಸಿಯಾಗಿದೆ. ಬಿಜೆಪಿಯಲ್ಲಿದ್ದುಕೊಂಡು, ಸಚಿವರಾದ ಮೇಲೂ ಕಾಂಗ್ರೆಸ್ ನಾಯಕರನ್ನ ಯಾಕೆ ಭೇಟಿ ಮಾಡಿದ್ರು ಎಂಬುದು ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಇದರ ಜೊತೆಗೆ ಕಾಂಗ್ರೆಸ್ ನಾಯಕರು ಯಾವಾಗಲೂ ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಮಾತಿಗೆ ಕೆಂಡಾಮಂಡಲಾರಾಗಿದ್ದಾರೆ. ಈ ನಡುವೆ ಈ ರೀತಿಯ ಬೆಳವಣಿಗೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಆನಂದ್ ಸಿಂಗ್ ಗೆ ಇದೇ ಮುಳುವಾಗಲೂ ಬಹುದು ಎಂದೇ ಹೇಳಲಾಗುತ್ತಿದೆ.
ಚುನಾವಣೆ ಹತ್ತಿರ ಇರುವಾಗ್ಲೇ ಹೀಗೆ ಪಕ್ಷಾಂತರ ಪರ್ವ ಶುರುವಾಗಿದ್ದು, ಪಕ್ಷಗಳಿಗೆ ತಲೆ ಬಿಸಿಯಾಗಿದೆ. ಆನಂದ್ ಸಿಂಗ್ ಅವರಿಗೂ ಪಕ್ಷಾಂತರ ಹೊಸದೇನಲ್ಲ. ಮೊದಲು ಬಿಜೆಪಿಯಲ್ಲೇ ಇದ್ದವರು. 2008ರಲ್ಲೇ ಬಿಜೆಪಿಯಿಂದ ಸಚಿವರಾಗಿದ್ದವರು. ಆ ಬಳಿಕ 2013ರಲ್ಲೂ ಮತ್ತೆ ಮರು ಆಯ್ಕೆಯಾಗಿದ್ದರು. ಆ ಬಳಿಕ ಕಾಂಗ್ರೆಸ್ ಸೇರಿದ್ದರು. ಬಳಿಕ ಆಪರೇಷನ್ ಕಮಲಕ್ಕೆ ಸಿಲುಕಿ ಬಿಜೆಪಿಯಲ್ಲಿಯೂ ಸಚಿವರಾಗಿದ್ರು. ಇದೀಗ ಮತ್ತೆ ಕಾಂಗ್ರೆಸ್ ಸೇರುವ ಲಕ್ಷಣಗಳು ಕಾಣುತ್ತಿವೆ.