ಚಿತ್ರದುರ್ಗ : ಇನ್ನು ಕೆಲವು ಜನ ಅದ್ಯಾವ ಕಾಲದಲ್ಲಿದ್ದಾರೆ. ಅದೆಷ್ಟು ಮೂಡನಂಬಿಕೆ ನಂಬ್ತಾರೆ. ನಿಧಿ ಸಿಗುತ್ತೆ ಅನ್ನೋ ದುರಾಸೆಯಿಂದ ಅದೆಷ್ಟೋ ನರಬಲಿಯನ್ನೇ ಕೊಟ್ಟಿದ್ದಾರೆ. ಆಗಾಗ ಅಲ್ಲಲ್ಲಿ ವಾಮಾಚಾರದ ಕುರುಹು ಕಾಣ್ತಾನೆ ಇರುತ್ತೆ. ಇದೀಗ ಅಂತಹುದೇ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ನಿಧಿ ಆಸೆಗಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಎಂ ಡಿ ಕೋಟೆಯಲ್ಲಿ ವಾಮಾಚಾರ ವಾಮಾನಡೆದಿದೆ. ಚೋಳರ ಕಾಲದ ಐತಿಹಾಸಿಕ ರಂಗಪ್ಪ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನ ಹಾಗೂ ವೀರಗಲ್ಲಿಗೆ ದಾರದಲ್ಲಿ ದಿಗ್ಭಂದನ ಹಾಕಿದ್ದಾರೆ.
ದೇವಸ್ಥಾನದಲ್ಲಿ ಈ ವಿಚಿತ್ರ ಪೂಜೆ ನೋಡಿದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಪ್ರಾಣಿ ಬಲಿಯನ್ನು ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಷ್ಟೆ ಅಲ್ಲ ಕೊಡಲಿ, ಗುದ್ದಲಿ ಏನೇನೋ ಸುತ್ತಮುತ್ತ ಬಿಸಾಕಿದ್ದಾರೆ. ವಾಮಾಚಾರವನ್ನ ದೇವಸ್ಥಾನದಲ್ಲಿ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ.