Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಾತನಾದ ಖುಷಿಯಲ್ಲಿ ಡಿಕೆಶಿ : ಹೆಣ್ಣು ಮಗುವಿಗೆ ಜನ್ಮ ನೀಡಿದ ಐಶ್ವರ್ಯ

---Advertisement---

ಬೆಂಗಳೂರು: ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಡಿಕೆಶಿ ಹೆಗ್ಡೆ ತಾಯಿಯಾಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಡಿಕೆ ಶಿವಕುಮಾರ್ ಓಡೋಡಿ ಬಂದಿದ್ದಾರೆ. ತಾತನಾಗಿ ಬಡ್ತಿ ಪಡೆದ ಖುಷಿಯಲ್ಲಿ ಡಿಕೆಶಿ ಇದ್ದಾರೆ. ಇಡೀ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಡಿಕೆಶಿ ಕುಟುಂಬ ಮತ್ತು ಸಿದ್ಧಾರ್ಥ್ ಹೆಗ್ಡೆ ಅವರ ಕುಟುಂಬದಲ್ಲಿ ಈ ಹೊಸ ಅತಿಥಿಯ ಆಗಮನ ಹಬ್ಬದ ಕಳೆಯನ್ನು ತಂದಿದೆ. ಹೆಣ್ಣು ಮಗು ಹುಟ್ಟಿರುವುದು ಎರಡೂ ಕುಟುಂಬಗಳಿಗೆ ಹೆಚ್ಚಿನ ಸಂತೋಷ ತಂದಿದೆ. ಮಗಳ ಮದುವೆಯನ್ನು ಅತ್ಯಂತ ಅದ್ಧೂರಿಯಾಗಿ ಮಾಡಿದ್ದ ಡಿಕೆಶಿ, ಈಗ ಮೊಮ್ಮಗಳ ಆಗಮನವನ್ನೂ ಅಷ್ಟೇ ಸಡಗರದಿಂದ ಆಚರಿಸುತ್ತಿದ್ದಾರೆ.

2021ರ ಫೆಬ್ರವರಿ 14 ರಂದು ಅಮರ್ಥ್ಯ ಹಾಗೂ ಐಶ್ವರ್ಯಾ ಮದುವೆಯಾಗಿತ್ತು. ಇದೀಗ ಇಬ್ಬರ ದಾಂಪತ್ಯ ಜೀವನದ ಗುರುತಾಗಿ ಹೆಣ್ಣು ಮಗು ಜನಿಸಿದೆ. ಮೊಮ್ಮಗಳನ್ನು ಕಂಡು ಡಿಕೆ ಶಿವಕುಮಾರ್ ಅವರಂತು ಹರ್ಷೋದ್ಘಾರ ಪಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...