ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 01 : ಮೇ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಶ್ರಮ ಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದಿಂದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಕರ್ನಾಟಕ ರಾಜ್ಯ ಶ್ರಮ ಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷ ರಮೇಶ್ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿ ಮಾತನಾಡುತ್ತ ಅಮೇರಿಕಾದ ಚಿಕಾಗೋ ನಗರದಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟದಲ್ಲಿ ಅನೇಕರು ಜೀವ ಕಳೆದುಕೊಳ್ಳುತ್ತಾರೆ. ಅಂದಿನಿಂದ ಪ್ರತಿ ವರ್ಷವೂ ಮೇ. 1 ರಂದು ವಿಶ್ವಾದ್ಯಂತ ಕಾರ್ಮಿಕ ದಿನಾಚರಣೆ ಆಚರಿಸುವ ಮೂಲಕ ಹುತಾತ್ಮರನ್ನು ಸ್ಮರಿಸಲಾಗುವುದೆಂದು ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ, ಕಾರ್ಮಿಕ ಮುಖಂಡರುಗಳಾದ ರಹಿಂಸಾಬ್, ರೋಷನ್‍ಅಲಿ, ಲೋಕಣ್ಣ, ಓಂಕಾರಣ್ಣ, ಶಿವಣ್ಣ, ಬಸವರಾಜು ಕೆ.ಜಿ. ಚಂದ್ರಪ್ಪ, ಓಬಣ್ಣ ವೀರೇಶ್, ಅಬ್ದುಲ್‍ಸತ್ತರ್, ಮುರುಳಿ, ಭಾಷಣ್ಣ, ದೇವರಾಜ್, ವೆಂಕಟೇಶ್, ತಿಪ್ಪೇಶ್, ಅನಿತಮ್ಮ, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.




















