Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಲೆ, ಸಾಹಿತ್ಯ, ಸಂಗೀತದಿಂದ ಮಾನವೀಯತೆ ಉಳಿವು: ಜನಪದ ಅಕಾಡೆಮಿ ಅಧ್ಯಕ್ಷ ಶಿವಪ್ರಸಾದ್ ಸಂದೇಶ

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 27 : ಇಂದಿನ ದಿನಗಳಲ್ಲಿ ಮನುಷ್ಯ ಮನುಷ್ಯನ ಸಂಬಂಧಗಳು ಹಾಳಾಗುತ್ತಾ ಹೋಗುತ್ತಿವೆ. ಅತಿ ಆಸೆಯಿಂದ ಮನುಷ್ಯ ಬದುಕಿನಲ್ಲಿ ಶಾಂತಿಯನ್ನು ಕಾಣದೆ ಅನೇಕ ಸಮಸ್ಯೆಗಳಲ್ಲಿ ಬಿದ್ದು ಹೊರಳಾಡುವ ಪರಿಸ್ಥಿತಿಯನ್ನ ನೋಡುತ್ತೇವೆ ಈ ಸಂಬಂಧಗಳು ಉತ್ತಮಗೊಳ್ಳಬೇಕಾದರೆ ಕಲೆ, ಸಾಹಿತ್ಯ, ಸಂಸ್ಕಾರದಲ್ಲಿ ಮನುಷ್ಯ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಳ್ಳಿ ಶಿವಪ್ರಸಾದ್ ತಿಳಿಸಿದರು.

 

ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಶ್ರೀ ಮಾರುತಿ ಸಂಸ್ಕøತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಸಂಗೀತೋತ್ಸವ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಧಾಟಿಸಿ ಮಾತನಾಡಿದರು.

 

ಇಂದಿನ ದಿನಮಾನಗಳಲ್ಲಿ ಯುದ್ಧದಂತಹ ಪರಿಸ್ಥಿತಿಯನ್ನ ನಾವು ನೋಡಬೇಕಾಗಿದೆ ಶಾಂತಿಯತ ಸಮಾಜವನ್ನು ನಿರ್ಮಾಣ ಮಾಡುವ ಅಗತ್ಯವಿದೆ. ನಾವು ಆಧುನಿಕತೆ ಹೊಂದಿದಂತೆ ಮನುಷ್ಯತ್ವ ಕಳೆದುಕೊಳ್ಳುತಿದ್ದೇವೆ. ಕಲೆ, ಸಾಹಿತ್ಯ, ಸಂಗೀತ ಹಾಗು ಸಂಸ್ಕøತಿಕ ವಾತಾವರಣದಿಂದ ಸಮಾಜವನ್ನು ತಿದ್ದುವ ಕೆಲಸವಾಗಬೇಕು ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸರ್ಕಾರದ ಅಕಾಡೆಮಿಗಳು ಕಾರ್ಯಪ್ರವೃತ್ತವಾಗಬೇಕಾಗಿದೆ ಎಂದು ತಿಳಿಸಿದರು.

 

ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಡಾ.ಮಲ್ಲಿಕಾರ್ಜುನ ಕಲ್ಮರಳ್ಳಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡರ ಬುಡುಕಟ್ಟು ಸಂಸ್ಕøತಿ, ಕಾಡುಗೊಲ ಬುಡುಕಟ್ಟು ಸಂಸ್ಕøತಿಗಳಿಂದ ಅನೇಕ ವಿಚಾರಗಳನ್ನು ತಿಳಿಯಬುದಾಗಿದೆ. ಬುಡುಕಟ್ಟು ಸಂಸ್ಕøತಿಯಿಂದ ಇಂದು ಜನಪದ ಸಂಸ್ಕøತಿ ಉಳಿದಿದೆ. ಇಂದಿನ ಸಾಮಾಜಿಕ ಜಾಲತಾನಗಳ ಪ್ರಭಾವದಿಂದ ಜನಪದ ಕಲೆಯನ್ನು ಉಳಿಸಿ ಬೆಳಸಬೇಕಾಗಿದೆ ಎಂದು ತಿಳಿಸಿದರು.

 

ಇದೇ ಸಂದರ್ಭದಲ್ಲಿ ಹಿರಿಯ ಸಂಗೀತಗಾರ ತೋಟಪ್ಪ ಉತ್ತಂಗಿ, ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪುರಸೃತ ಆಯಿತೋಳು ವಿರುಪಾಕ್ಷಪ್ಪ, ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಡಾ.ಮಲ್ಲಿಕಾರ್ಜುನ ಕಲ್ಮರಳ್ಳಿ, ಹಿರಿಯ ರಂಗಭೂಮಿ ಕಲಾವಿದ ಜಿ.ಎನ್.ಚಂದ್ರಪ್ಪ, ಕಲಾವಿದ ಗೋಂದಾಳಪ್ಪ, ಕಲಾವಿದ ಚನ್ನಬಸಪ್ಪ ಚೋಳಗುಡ್ಡ, ಸೋಬಾನೆ ಕಲಾವಿದೆ ಸಿದ್ಧಮ್ಮ ಗಂಜಿಗಟ್ಟೆ. ಜಿ.ಎನ್.ಚಂದ್ರಪ್ಪ, ಚನ್ನಬಸಪ್ಪ ಚೋಳಗುಡ್ಡ, ಸಿದ್ಧಮ್ಮ ಗಂಜಿಗಟ್ಟೆ. ಉಪ್ಪನಾಯಕಹಳ್ಳಿ ಚಂದ್ರಪ್ಪ ಮತ್ತು ಸಂಗಡಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...