Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಂಟಪದಲ್ಲೇ ಬಾಲ್ಯವಿವಾಹ ಭಂಗ: ಅಕ್ಕ ಪಡೆ ಕಾರ್ಯಾಚರಣೆಯಿಂದ ಬಾಲಕಿ ರಕ್ಷಣೆ

---Advertisement---

ಬೆಳಗಾವಿ: ನಗರದ ವಂಟಮುರಿ ಕಾಲನಿಯಲ್ಲಿ ನಡೆಯಲಿದ್ದ ಬಾಲ್ಯವಿವಾಹವನ್ನು ಅಕ್ಕ ಪಡೆ ಸಮಯೋಚಿತವಾಗಿ ತಡೆದು, 17 ವರ್ಷದ ಬಾಲಕಿಯನ್ನು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಗೊಂಡ ಅಕ್ಕ ಪಡೆ ಸಿಬ್ಬಂದಿ ವಿಚಾರಣೆ ನಡೆಸಿದಾಗ ಮದುವೆ ಸಿದ್ಧತೆ ನಡೆಯುತ್ತಿರುವುದು ಪತ್ತೆಯಾಯಿತು.

ಘಟನೆಯ ವಿವರಗಳ ಪ್ರಕಾರ, ಏಪ್ರಿಲ್ 20ರಂದು ಪೆಟ್ರೋಲಿಂಗ್ ವೇಳೆ ಮನೆಯ ಮುಂದೆ ಮಂಟಪ ಹಾಕಿರುವುದನ್ನು ಗಮನಿಸಿದ ಸಿಬ್ಬಂದಿ, ಮನೆಗೆ ತೆರಳಿ ವಿಚಾರಿಸಿದರು. ಆಗ ಏಪ್ರಿಲ್ 21ರಂದು ಅಪ್ರಾಪ್ತ ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪೂಣೆಯ ಯುವಕನೊಂದಿಗೆ ನಡೆಸಲು ಸಿದ್ಧತೆ ನಡೆಯುತ್ತಿರುವುದು ತಿಳಿದುಬಂದಿತು.ದಾಖಲೆಗಳನ್ನು ಪರಿಶೀಲಿಸಿದಾಗ ಬಾಲಕಿಯ ವಯಸ್ಸು ಕೇವಲ 17 ವರ್ಷ 4 ತಿಂಗಳು ಎಂಬುದು ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರದಿಂದ ದೃಢಪಟ್ಟಿತು. ತಕ್ಷಣವೇ ಈ ಕುರಿತು ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.

ಇನ್ಸ್‌ಪೆಕ್ಟರ್ ದಿಲೀಪ್ ಪಿ. ನಿಂಬಾಳಕರ ಅವರ ಮಾರ್ಗದರ್ಶನದಲ್ಲಿ ಅಕ್ಕ ಪಡೆ, ಮಕ್ಕಳ ಸಹಾಯವಾಣಿ ತಂಡ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮದುವೆಯನ್ನು ತಡೆದರು. ಬಳಿಕ ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದರು.ಈ ಪ್ರಕರಣದಲ್ಲಿ ಬಾಲ್ಯವಿವಾಹಕ್ಕೆ ಮುಂದಾಗಿದ್ದ ಬಾಲಕಿಯ ತಂದೆಯ ವಿರುದ್ಧ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...