ಮೈಸೂರು: ಗ್ಯಾಸ್ ಪೈಪ್ ಲೈನ್ ವಿಚಾರವಾಗಿ ಜಿಲ್ಲೆಯಲ್ಲಿ ಶಾಸಕರು, ಸಂಸದರ ನಡುವೆ ವಾರ್ ಶುರುವಾಗಿದೆ. ನಿನ್ನೆ ಜಿಲ್ಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ ಮಾತಿಗೆ ಇಂದು ಮತ್ತೆ ಶಾಸಕರು ಕಿಡಿಕಾರಿದ್ದಾರೆ. ಪ್ರತಾಪ್ ಸಿಂಹ ಕಮೀಷನ್ ತೆಗೆದುಕೊಳ್ಳುತ್ತಿರಬೇಕು ಎಂದು ಆರೋಪಿಸಿದ್ದಾರೆ.
ಮೊಬೈಲ್ ಕಂಪನಿಗಳು ರಸ್ತೆ ಅಗೆದರೆ ಸುಮ್ಮನೆ ಇರುತ್ತೀರಿ. ಊರುರು ಅಗೆದು ಹೋದರು ಯಾರು ಕೇಳುವುದಿಲ್ಲ. ಆಗ ರಸ್ತೆ ಹದಗೆಟ್ಟು ಹೋಗಿದ್ದು ಯಾರು ಕೇಳಲಿಲ್ಲಾ. ಆಗ ಯಾಕೆ ಯಾರು ಮಾತನಾಡಲಿಲ್ಲ ಎಂದು ಪ್ರತಾಪ್ ಸಿಂಹ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದರು. ಇದೀಗ ಶಾಸಕ ನಾಗೇಂದ್ರ, ಶಾಸಕ ರಾಮದಾಸ್ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಾಪ್ ಸಿಂಹ ಅವರನ್ನ ಕಂಪನಿಯವರು ವೈಯಕ್ತಿಕವಾಗಿ ಭೇಟಿ ಮಾಡಿರಬಹುದು. ಅದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿರಬಹುದು. ಚಾಮುಂಡೇಶ್ವರಿ ಆಣೆಗೂ ನಾನು ಕಮಿಷನ್‍ಗಾಗಿ ಅಲ್ಲ ಜನರ ಹಿತದೃಷ್ಟಿಯಿಂದಾಗಿ ಧ್ವನಿ ಎತ್ತಿದ್ದೇನೆ. ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಇದು ನನ್ನೂರು ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿದೆ. ಗ್ಯಾಸ್ ಯೋಜನೆ ಕಾಮಗಾರಿ ವೇಳೆ ಅನಾಹುತ ಆದರೆ ಯಾರು ಜವಾಬ್ದಾರಿ. ಬೇರೆ ಬೇರೆ ಕಡೆ ಅನಾಹುತಗಳು ಆಗಿವೆ. ಅನಾಹುತಕ್ಕೆ ಯಾರು ಹೊಣೆ ಅದನ್ನು ಪ್ರಶ್ನಿಸಿದರೆ ತಪ್ಪಾ? ಎಂದಹ ಪ್ರಶ್ನಿಸಿದ್ದಾರೆ.