Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಿಳಾ‌ ಮೀಸಲಾತಿ ಬಿಲ್ ಫೇಲ್ : ಸಿದ್ದರಾಮಯ್ಯ ಹೇಳಿದ್ದೇನು..?

---Advertisement---

ಬೆಂಗಳೂರು: ಮಹಿಳಾ ಮೀಸಲಾತಿ ಬಿಲ್ ಅನುಮೋದನೆ ಸಾಧ್ಯವಾಗಿಲ್ಲ. ಹಿನ್ನೆಲೆ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಅಲ್ಲಿಂದ ಮಹಿಳೆಯರೆಲ್ಲ ಹೊರಗೆ ಬನ್ನಿ ಎಂಬ ಮಾತನ್ನು ಹೇಳ್ತಿದ್ದಾರೆ. ಈ ವಿಚಾರಕ್ಕೆ‌ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಮಾತನ್ನಾಡಿದ್ದಾರೆ. ನಾವೂ ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ ಎಂದಿದ್ದಾರೆ.

2023ರಲ್ಲಿಯೇ ಆ ಬಿಲ್‌ ಪಾರ್ಲಿಮೆಂಟ್ ನಲ್ಲಿ‌ ಪಾಸಾಗಿದೆ. ಅವರು ಇಂಪ್ಲಿಮೆಂಟ್ ಮಾಡಬೇಕು ಅಷ್ಟೇ. ಇಂಪ್ಲಿಮೆಂಟ್ ಮಾಡಲಿ. ಕಾನ್ಸ್ಟಿಟ್ಯೂಷನ್ ಅಮೆಡ್ಮೆಂಟ್ ತಂದಿದ್ದಕ್ಕೆ ಬಿದ್ದೋಯ್ತು. ಮಹಿಳಾ ಮೀಸಲಾತಿ ಒಂದೇ ಮಾಡಿದ್ರೆ ಲಿಮಿಟೇಷನ್ ಮಾಡದೆ, ಮಿಕ್ಸ್ ಮಾಡಿ ಮಾಡುದ್ರು ಅದಕ್ಕೆ ಬಿದ್ದೋಯ್ತು. ಇದೆಲ್ಲಾ ರಾಜಕಾರಣ ಅಷ್ಟೇ. ಡಿಲಿಮಿಟೇಷನ್ಸ್ ಮತ್ತು ಮಹಿಳಾ ಮೀಸಲಾತಿ ಎರಡನ್ನು ಒಟ್ಟಿಗೆ ತೆಗೆದುಕೊಂಡು ಬಂದಿದ್ದರು. ‌ನಾವೂ ವಿರೋಧ ಮಾಡ್ತಾ ಇರೋದು ಕೇವಲ ಡಿ ಲಿಮಿಟೇಷನ್ಸ್ ಬಗ್ಗೆ. ನಾವೂ ಮಹಿಳಾ ಮೀಸಲಾತಿಯನ್ನ ವಿರೋಧಿಸ್ತಾ ಇಲ್ಲ ಎಂದಿದ್ದಾರೆ.

ಇತ್ತೀಚೆಗೆ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ರಾಜಣ್ಣ ಅವರು ಕೂಡ ಗುರುತಿಸಿಕೊಂಡಿದ್ದಾರೆ. ಆದರೆ ಸರ್ಕಾರದ ವಿರುದ್ಧ ಮಾತನ್ನಾಡಿದರು ಎಂಬ ಕಾರಣಕ್ಕೆ ಅವರನ್ನ ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ. ಈಗ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದವರನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಮಾತು ಇದೆ. ಇದಕ್ಕೆ ರಾಜಣ್ಣ ಅವರು, ಸಿಎಂ ಅವರ ಆಪ್ತರ ಪರವಾಗಿ ನಿಲ್ಲಬೇಕು. ಆದರೆ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಎಂಬ ಮಾತನ್ನ ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ರಾಜಣ್ಣನ್ನ ನಿನ್ನೆನೆ ಕರೆದು‌ ಮಾತನ್ನಾಡಿದ್ದೀನಿ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now