ಮೈಸೂರು: ಗ್ರಾಮೀಣ ಪ್ರದೇಶದಲ್ಲಿ ಈ ಗ್ಯಾಸ್ ಕನೆಕ್ಷನ್ ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾಕಂದ್ರೆ ಕಡಿಮೆ ರೇಟ್ ಇದ್ದಾಗ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಗ್ಯಾಸ್ ಕನೆಕ್ಷನ್ ಏನೋ ಕೊಡಿಸಿಕೊಂಡ್ರು. ಆದ್ರೆ ಈಗ ಸಾವಿರ ರೂಪಾಯಿ ಎಲ್ಲಾ ಸೇರಿ. ಹೀಗಾಗಿ ಈ ಗ್ಯಾಸ್ ಸಹವಾಸವೇ ಬೇಡ ಎಂದು ಗ್ರಾಮೀಣ ಜನತೆ ಮತ್ತೆ ಸೌದೆ ಒಲೆ ಕಡೆಗೆ ವಾಲುತ್ತಿದ್ದಾರೆ.
ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, ಗ್ಯಾಸ್ ಪೈಪ್ ಲೈನ್ ಹಾಕೋದ್ರಿಂದ 500. ರೂಪಾಯಿಗೆ ಸಿಗಲಿದೆ. 400 ರೂಪಾಯಿ ಉಳಿತಾಯವಾಗುತ್ತೆ ಎಂದಿದ್ದಾರೆ. ಗ್ಯಾಸ್ ಪೈಪ್ಲೈನ್ ವ್ಯವಸ್ಥೆ ಅತ್ಯಂತ ಮಹತ್ವದ್ದು. ಈಗ 904 ರೂಪಾಯಿ ಗ್ಯಾಸ್ ರೇಟ್ ಇದೆ. ಡೆಲಿವರಿ ಚಾರ್ಜ್ ಸೇರಿ ಸಾವಿರ ಆಗುತ್ತೆ. ಈ ಪೈಪ್ಲೈನ್ ಮಾಡೋದ್ರಿಂದ ಕಡಿಮೆ ಹಣಕ್ಕೆ ಸಿಗುತ್ತೆ.
ಈಗಾಗ್ಲೇ ಈ ಯೋಜನೆ ಗುಜರಾತ್ ನಲ್ಲಿದೆ. ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ಹಲವೆಡೆ ಗ್ಯಾಸ್ ಪೈಪ್ ಲೈನ್ ಅಳವಡಿಸಲು ಯೋಜನೆ ನಡೆಯುತ್ತಾ ಇದೆ. ಗ್ಯಾಸ್ ಪೈಪ್ಲೈನ್ ಯೋಜನೆಯನ್ನ ಹಲವರು ವಿರೋಧಿಸುತ್ತಿದ್ದಾರೆ. ಅಲ್ಲ ಅವರೆಲ್ಲಾ ಮೊಬೈಲ್ ಕಂಪನಿಗಳು ಅಗೆದ ಪೈಪ್ಲೈನ್ ಬಗ್ಗೆ ವಿರೋಧಿಸಿದರಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಗ್ಯಾಸ್ ಗಾಗಿ ತೆಗೆದ ಪೈಪ್ಲೈನ್ ಅನ್ನ 24 ಗಂಟೆಗಳ ಒಳಗೆ ಮುಚ್ಚಲಾಗುತ್ತದೆ. ಆ ಹಳ್ಳಗಳನ್ನ ಸರಿ ಮಾಡಲು ಪಾಲಿಕೆಯಿಂದಲೇ ಹಣ ನೀಡಲಾಗುತ್ತೆ. ಖಾಸಗಿ ಕಂಪನಿಗಳು ಹಳ್ಳ ಹಗೆದರೆ ಯಾರು ಕೇಳಲಿಲ್ಲ. ಆದ್ರೆ ಜನರಿಗೆ ಅನುಕೂಲವಾಗುವಂತ ಕೆಲಸ ಮಾಡಲು ಹೊರಟರೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಕಿಡಿಕಾರಿದ್ದಾರೆ.