Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಾತ್ಮ ಗಾಂಧೀಜಿಯ 10ನೇ ತರಗತಿ ಅಂಕಪಟ್ಟಿ ವೈರಲ್! ಮಾರ್ಕ್ಸ್ ಎಷ್ಡು ಗೊತ್ತೆ ?

---Advertisement---

ದೇಶದ ರಾಷ್ಟ್ರಪಿತೃ ಮಹಾತ್ಮ ಗಾಂಧಿ ಅವರ ವಿದ್ಯಾರ್ಥಿ ಜೀವನದ ಅಪರೂಪದ ಮಾಹಿತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಗಾಂಧೀಜಿ ನಂತರ ದೇಶದ ಮಹಾನ್ ನಾಯಕನಾಗಿ ಹೊರಹೊಮ್ಮಿದ ಉದಾಹರಣೆ ಮತ್ತೆ ಚರ್ಚೆಗೆ ಬಂದಿದೆ.

‘ಕಾಮನ್ ಮ್ಯಾನ್’ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಗಾಂಧೀಜಿಯವರ 10ನೇ ತರಗತಿಯ ಅಂಕಪಟ್ಟಿ ಹೊರಬಂದಿದೆ. 1887ರಲ್ಲಿ ಆಲ್ಫ್ರೆಡ್ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅವರು ಪಡೆದ ಅಂಕಗಳ ವಿವರ ಇದರಲ್ಲಿ ನೀಡಲಾಗಿದೆ.

https://x.com/CommanMan777589/status/2044377766112424098?s=20

ಅಂಕಪಟ್ಟಿಯ ಪ್ರಕಾರ, ಇಂಗ್ಲಿಷ್‌ನಲ್ಲಿ 89 ಅಂಕ ಪಡೆದಿದ್ದ ಗಾಂಧೀಜಿ, ಗಣಿತದಲ್ಲಿ 59, ದ್ವಿತೀಯ ಭಾಷೆಯಲ್ಲಿ 45, ವಿಜ್ಞಾನದಲ್ಲಿ 34 ಮತ್ತು ಇತಿಹಾಸದಲ್ಲಿ ಕೇವಲ 20 ಅಂಕಗಳನ್ನು ಗಳಿಸಿದ್ದರು. ಒಟ್ಟು 625 ಅಂಕಗಳಲ್ಲಿ 247.5 ಅಂಕಗಳನ್ನು ಪಡೆದಿರುವುದು ಗಮನಾರ್ಹ. ಅಂದಿನ ಪರೀಕ್ಷೆಯಲ್ಲಿ ಸುಮಾರು 800 ವಿದ್ಯಾರ್ಥಿಗಳಲ್ಲಿ 404ನೇ ಸ್ಥಾನ ಪಡೆದಿದ್ದರೆಂಬ ಮಾಹಿತಿ ಕೂಡ ಹೊರಬಂದಿದೆ.ಈ ಮಾಹಿತಿ ಬಹಿರಂಗವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಜೋರಾಗಿದೆ. “ಸರಾಸರಿ ವಿದ್ಯಾರ್ಥಿಯಾದರೂ ಜೀವನದಲ್ಲಿ ಮಹತ್ವ ಸಾಧಿಸಬಹುದು” ಎಂಬ ಸಂದೇಶವನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ಈ ಅಂಕಪಟ್ಟಿಯ ನಿಖರತೆಯ ಬಗ್ಗೆ ಪ್ರಶ್ನೆ ಎತ್ತಿದರೆ, ಮತ್ತಿತರರು ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ವೀರ ಸಾವರ್ಕರ್ ಅವರ ವಿದ್ಯಾಭ್ಯಾಸದ ವಿವರಗಳನ್ನೂ ತಿಳಿಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.ಈ ವೈರಲ್ ಪೋಸ್ಟ್ ಒಂದೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಶಿಕ್ಷಣ ಮತ್ತು ಸಾಧನೆಗಳ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಅಂಕಗಳು ಮಾತ್ರವೇ ಜೀವನದ ಯಶಸ್ಸನ್ನು ನಿರ್ಧರಿಸುವುದಿಲ್ಲ ಎಂಬ ಸಂದೇಶವನ್ನು ಗಾಂಧೀಜಿಯವರ ಜೀವನ ಮತ್ತೊಮ್ಮೆ ನೆನಪಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...