ಬೆಂಗಳೂರು: ನಿನ್ನೆ ರಾತ್ರಿ ಶಾಸಕರ ಭವನದ ಬಳಿ ನಡೆದ ಪೊಲೀಸರು ಮತ್ತು ಶಾಸಕರ ನಡುವಿನ ವಾಗ್ವಾದಕ್ಕೆ ಸ್ವತಃ ಶಾಸಕ ಎಂಪಿ ಕುಮಾರಸ್ವಾಮಿ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು ಪೊಲೀಸರ ಜೊತೆಗಿನ ವರ್ತನೆ ಬೇಸರ ತರಿಸಿದೆ. ಆ ಪೊಲೀಸ್ ಗೆ ನಾನು ಶಾಸಕ ಅಂತಾನೆ ಗೊತ್ತಿಲ್ಲ. ನಾನೊಬ್ಬ ಎಂಎಲ್ಎ. ನನ್ನ ಕಾರು ಹೋಗೋದಕ್ಕೆ ಬಿಡಲಿಲ್ಲ. ಸುಮಾರು ಕಾಲು ಗಂಟೆ ಕಾರು ಹೋಗೋದಕ್ಕೆ ಬಿಡ್ಲಿಲ್ಲ.
ಆ ಬಳಿಕ ಹೋಗಿ ಕಾರು ಹೋಗೋದಕ್ಕೆ ಯಾಕೆ ಬಿಡಲ್ಲ ಎಂದೇ ಪ್ರಶ್ನಿಸಿದೆ. ನಾನು ಶಾಸಕನೇ ಅಲ್ಲ ಎಂಬಂತೆ ಮಾತಾಡಿದ್ರು. ಆಗ ನಾನು ಎಂಎಲ್ಎ ಅನ್ನೋದನ್ನ ಹೇಳೋದಕ್ಕೆ ಪ್ರಯತ್ನ ಪಟ್ಟೆ ಎಂದು ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಬೇಸರ ಹೊರ ಹಾಕಿದ್ದಾರೆ.