ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಸಿಎಂ ಇಬ್ರಾಹಿಂ ಇಂದು ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ನನಗೂ ಕಾಂಗ್ರೆಸ್ ಗೂ ಮುಗಿದ ಅಧ್ಯಾಯ ಎಂದಿದ್ದರು. ಕಾಂಗ್ರೆಸ್ ಬಿಡೋದು ಕನ್ಫರ್ಮ್ ಅನ್ನೋ ರೀತಿ ಚರ್ಚೆಯಾಗುತ್ತಿದೆ. ಇದೀಗ ಇವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾನು ಖಂಡಿತ ಅವರ ಬಳಿ ಮಾತಾಡ್ತೀನಿ ಎಂದಿದ್ದಾರೆ.
ಸಿಎಂ ಇಬ್ರಾಹಿಂ ಸೀನಿಯರ್ ಲೀಡರ್. ಅವರು ಕಾಂಗ್ರೆಸ್ ಗಾಗಿ ದುಡಿದಿದ್ದಾರೆ. ಸಿದ್ದರಾಮಯ್ಯ ಅವರು ಅವರಿಗೆ ಎಂಎಲ್ಎ ಟಿಕೆಟ್ ನೀಡಿದ್ದರು. ಅವರು ಸೋತರು ಕೂಡ ಯೋಜನಾ ಆಯೋಗದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ನಿಂದ ಎರಡು ಬಾರಿ ಎಂಎಲ್ಸಿ ಮಾಡಲಾಗಿದೆ.
ಇನ್ನು ನಾನು ತಬ್ಬಲಿಯಂತಾಗಿದ್ದೇನೆ ಎಂಬ ಇಬ್ರಾಹಿಂ ಅವರ ಮಾತಿಗೆ ರಿಯಾಕ್ಟ್ ಮಾಡಿದ್ದು, ಇಲ್ಲಿ ಯಾರೂ ತಬ್ಬಲಿಗಳಲ್ಲ. ಸಿದ್ದರಾಮಯ್ಯ ಸೇರಿದಂತೆ ನಾನು ತಬ್ಬಲಿಯಲ್ಲ. ಅವರು ಹಿರಿಯರಿದ್ದಾರೆ. ಹೀಗಾಗಿ ಅವರ ಬಳಿ ನಾನು ಮಾತಾಡುತ್ತೇನೆ ಎಂದಿದ್ದಾರೆ.