Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಇಂತಹ ಸಿಸಿಟಿವಿ ಕ್ಯಾಮೆರಾಗಳಿಗೆ ಬ್ರೇಕ್! ದೇಶದ ಭದ್ರತೆಗೆ ಕೇಂದ್ರದ ಕಠಿಣ ಕ್ರಮ

---Advertisement---

ನವದೆಹಲಿ : ದೇಶದ ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಕೆಲವು ವಿದೇಶಿ, ವಿಶೇಷವಾಗಿ ಚೀನಾ ಮೂಲದ ಕ್ಯಾಮೆರಾಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ.ಹೈಕ್-ವಿಷನ್, ಟಿಪಿ-ಲಿಂಕ್, ದಹುವಾ ಸೇರಿದಂತೆ ಕೆಲವು ಕಂಪನಿಗಳ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಹೊಸ ಭದ್ರತಾ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಮುಂದೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಬಳಸುವ ಚಿಪ್‌ಸೆಟ್ ಯಾವ ದೇಶದ್ದೆಂಬುದು ಹಾಗೂ ಅದರ ಭದ್ರತೆ ಕುರಿತು ಸ್ಪಷ್ಟ ಪ್ರಮಾಣೀಕರಣ ನೀಡಬೇಕಾಗಿದೆ.

ಸರ್ಕಾರದ ಪ್ರಕಾರ, ಸಿಸಿಟಿವಿ ಕ್ಯಾಮೆರಾಗಳು ವಿಮಾನ ನಿಲ್ದಾಣಗಳು, ಸರ್ಕಾರಿ ಕಟ್ಟಡಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿವೆ. ಇವುಗಳಲ್ಲಿ ಸಂಗ್ರಹವಾಗುವ ಸೂಕ್ಷ್ಮ ಡೇಟಾ ವಿದೇಶಿ ಸರ್ವರ್‌ಗಳಿಗೆ ಸೋರಿಕೆಯಾಗುವ ಅಥವಾ ಹ್ಯಾಕಿಂಗ್ ಮೂಲಕ ದುರುಪಯೋಗವಾಗುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.ಹಿಂದಿನ ವರದಿಗಳ ಪ್ರಕಾರ, ಹಲವು ಸರ್ಕಾರಿ ಸಂಸ್ಥೆಗಳಲ್ಲಿ ಲಕ್ಷಾಂತರ ವಿದೇಶಿ ಕ್ಯಾಮೆರಾಗಳು ಅಳವಡಿಕೆಯಾಗಿದ್ದು, ಡೇಟಾ ಭದ್ರತೆ ಕುರಿತು ಪ್ರಶ್ನೆಗಳು ಎದ್ದಿದ್ದವು. ಜಾಗತಿಕ ಮಟ್ಟದಲ್ಲಿಯೂ ಸಿಸಿಟಿವಿ ಹ್ಯಾಕಿಂಗ್ ಪ್ರಕರಣಗಳು ಬೆಳಕಿಗೆ ಬಂದಿರುವುದು, ಈ ನಿರ್ಧಾರಕ್ಕೆ ಮತ್ತಷ್ಟು ಬಲ ನೀಡಿದೆ.

ಈ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬಂದಿದ್ದರೂ, ಇದು ಹೊಸದಾಗಿ ರೂಪುಗೊಂಡದ್ದಲ್ಲ. 2024ರಲ್ಲೇ ಅಧಿಸೂಚನೆ ಹೊರಡಿಸಿ, ಅನುಸರಿಸಲು ಎರಡು ವರ್ಷಗಳ ಅವಧಿ ನೀಡಲಾಗಿತ್ತು. ಅವಧಿ ಪೂರ್ಣಗೊಂಡ ಹಿನ್ನೆಲೆ ಈಗ ಕಠಿಣ ಅನುಷ್ಠಾನಕ್ಕೆ ಮುಂದಾಗಿದೆ.
ಈ ಕ್ರಮದಿಂದ ದೇಶೀಯ ಉತ್ಪಾದಕರಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಸಿಪಿ ಪ್ಲಸ್, ಕ್ಯುಬೊ, ಪ್ರಮಾ, ಮ್ಯಾಟ್ರಿಕ್ಸ್ ಸೇರಿದಂತೆ ಭಾರತೀಯ ಕಂಪನಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ತಮ್ಮ ಹಾದಿ ಬಲಪಡಿಸಿಕೊಂಡಿದ್ದು, ಪೂರೈಕೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂದುವರೆದಿವೆ.

ಇದಾಗ್ಯೂ, ಈಗಾಗಲೇ ಅಳವಡಿಸಿರುವ ವಿದೇಶಿ ಕ್ಯಾಮೆರಾಗಳನ್ನು ತಕ್ಷಣ ಬದಲಾಯಿಸುವ ಅಗತ್ಯವಿಲ್ಲ. ಆದರೆ ಭವಿಷ್ಯದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಪ್ರಮುಖ ಭದ್ರತಾ ಪ್ರದೇಶಗಳಲ್ಲಿ ಅವುಗಳನ್ನು ಹಂತ ಹಂತವಾಗಿ ಬದಲಾಯಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...