Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಚಿವರಿಂದಾಗದ ಕೆಲಸವನ್ನ ಶಾಸಕಿ ಮಾಡಿದ್ದಾರೆಂಬ ಸಂತೋಷವಿಲ್ಲ : ಶಾಸಕ ಸುಧಾಕರ್ ಮೇಲೆ ಪೂರ್ಣಿಮಾ ಕಿಡಿ 

Facebook
Twitter
Telegram
WhatsApp

 

ಚಿತ್ರದುರ್ಗ : ಮೊನ್ನೆಯಷ್ಟೇ ನಡೆದ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಸುಧಾಕರ್ ಕೂಡ ಭಾಗಿಯಾಗಿದ್ದರು. ಭಾಷಣ ಮಾಡುವಾಗ ಶಾಸಕಿ ಪತಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದಿದ್ದರು. ಆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಪೂರ್ಣಿಮಾ, ಕ್ಷೇತ್ರದ ಜನತೆ ನಿಮಗೆ ಹತ್ತು ವರ್ಷಗಳ ಕಾಲ ಆಡಳಿತ ನೀಡಿದ್ದರು. ಆದ್ರೂ ಜಿಲ್ಲೆಗೊಂದು ಸುಸಜ್ಜಿತವಾದ ಆಸ್ಪತ್ರೆ ತರಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಸಚಿವರು ಮಾಡದ ಕೆಲಸವನ್ನ ಶಾಸಕರು ಮಾಡ್ತಿದ್ದಾರೆ. ಇದನ್ನ ಜನತೆಗೆ ತಿರುಚಿ ಹೇಳುತ್ತಿದ್ದಾರೆ. ಸಚಿವ ಸುಧಾಕರ್ ಅವರು ಜನತೆಗೆ ಏನಾದರೂ ಹೇಳಬೇಕಲ್ಲ ಅದಕ್ಕಾಗಿ ಹೇಳುತ್ತಿದ್ದಾರೆ.

ಕ್ಷೇತ್ರದ ಜನರು ಕೂಡ ಎಲ್ಲವನ್ನ ಗಮನಿಸುತ್ತಿದ್ದಾರೆ. ನಗರದಲ್ಲಿರುವ 100 ಬೆಡ್ ಗಳ ಆಸ್ಪತ್ರೆ ನೆಪಕ್ಕೆ ಮಾತ್ರ ಇದೆ. ಆದ್ರೆ ಅದರಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲ. ಶೌಚಾಲಯದ ವ್ಯವಸ್ಥೆಯೂ ಇಲ್ಲ. ಹೀಗಿರುವಾಗ ನಾನು ಒಂದು ಸುಸಜ್ಜಿತ ಆಸ್ಪತ್ರೆ ಮಾಡಲು ಹೊರಟಾಗ ಹೀಗೆಲ್ಲಾ ಹೇಳ್ತಾ ಇದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ ತಂದಿದ್ದಾರೆ ಎಂಬ ಸಂತೋಷಕ್ಕಿಂತ ಕೆಟ್ಟ ಸಂದೇಶ ಹಬ್ಬಿಸಿ ಪ್ರಚಾರ ಪಡೆಯುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

ರೇವಣ್ಣ ಬಂಧನದ ಬೆನ್ನಲ್ಲೇ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು : ಮತ್ತಷ್ಟು ಸಂಕಷ್ಟ..!

ಬೆಂಗಳೂರು: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೊಬ್ಬರು ದೂರು ನೀಡಿರುವುದು ಹಾಗೂ ಇನ್ನೊಬ್ಬ ಸಂತ್ರಸ್ತೆಯ ಮಗ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು

error: Content is protected !!