ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಆರ್ಸಿಬಿ ಉದ್ಘಾಟನಾ ಪಂದ್ಯ ನಡೆಯುತ್ತಿದೆ. ಅದರಲ್ಲಿ ಆರ್ಸಿಬಿ ಮತ್ತು SRH ಪಂದ್ಯಗಳು ನಡೆಯುತ್ತಿವೆ. ಆದರೆ ಆರ್ಸಿಬಿ ಅಭಿಮಾನಿಗಳು ಮೋಸ ಹೋಗ್ಬೇಡಿ ಎಂದು ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಆರ್ಸಿಬಿ ಪಂದ್ಯ ನಡೆಯುತ್ತಿರುವ ಕಾರಣ ನಾವೂ ಬಹಳ ಅರ್ಥಪೂರ್ಣವಾಗಿ ಸಿದ್ಧತೆಗಳನ್ನ ಮಾಡಿಕೊಂಡಿದ್ದೀವಿ. ಆರ್ಸಿಬಿ ಫ್ಯಾನ್ಸ್ ಮತ್ತು ಕ್ರಿಕೆಟ್ ಪ್ರೇಕ್ಷಕರ ಉತ್ಸಾಹ ಕೂಡ ಚೆನ್ನಾಗಿದೆ. ಮಧ್ಯಾಹ್ನದ ವೇಳೆಗೇನೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸ್ಟೇಡಿಯಂ ಬಳಿ ಬಂದಿದ್ದರು. ಎಲ್ಲರನ್ನೂ ಸೇಫಾಗಿನೆ ನಾವೂ ಒಳಗೆ ಬಿಡ್ತೇವೆ. ಈ ಸಲ ಎಲ್ಲರಿಗೂ ಗೊತ್ತಿರುವಂತೆ ಫಂಡಮೆಂಟಲ್ ಚೇಂಜ್. ಕಬ್ಬನ್ ರಸ್ತೆಯಿಂದ ಮ್ಯಾಗ್ಸಿಮಂ ಸಂಪರ್ಕ ಕೊಟ್ಟಿದ್ದೇವೆ. ಕ್ವಿನ್ಸ್ ರೋಡ್ ನಲ್ಲಿ ಇರುವಂತ ಸಂಪರ್ಕವನ್ನ ಕಟ್ ಮಾಡಿದ್ದೇವೆ. ಮ್ಯಾಕ್ಸಿಮಮ್ ಜನ ಕಬ್ಬನ್ ರಸ್ತೆಯನ್ನ ಬಳಸಿ, ಲಿಂಕ್ ರೋಡ್ ಬಳಸಿ ಸ್ಟೇಡಿಯಂ ಒಳಗೆ ಬರುವ ಸಾಧ್ಯತೆ ಇರುತ್ತದೆ. ಹಿಂದಿನ ವರ್ಷಗಳು ಹೋಲಿಕೆ ಮಾಡಿದರೆ ಈ ವರ್ಷ ನಾಲ್ಕು ಗಂಟೆಗಳ ಮುಂಚೆಯೇ ಗೇಟ್ ಗಳನ್ನ ಓಪನ್ ಮಾಡಿದ್ದೇವೆ.

ನಿಮ್ ಹತ್ರ ಟಿಕೆಟ್ ಇದ್ದರೆ ಮಾತ್ರ ಸ್ಟೇಡಿಯಂ ಹತ್ರ ಬನ್ನಿ. ಇಲ್ಲದೆ ಇದ್ದರೆ ಬರೋದಕ್ಕೆ ಹೋಗಬೇಡಿ. ಎಲ್ಲಾ ಗೇಟ್ ಬಳಿ ಜನರಿಗೆ ಮಾಹಿತಿ ಕೊಡ್ತಾ ಇದ್ದೇವೆ. 2 ಸಾವಿರಕ್ಕಿಂತ ಅಧಿಕ ಸಿಬ್ಬಂದಿಗಳು ಇಲ್ಲಿ ಭದ್ರತೆ ಒದಗಿಸಿದ್ದಾರೆ. ಟಿಕೆಟ್ ಮುಗಿದು ಮೂರು ದಿನ ಆಗಿದೆ. ನಿಜವಾದ ಆರ್ಸಿಬಿ ಅಭಿಮಾನಿಗಳು ಮೋಸಕ್ಕೆ ಒಳಗಾವಿರೋದಕ್ಕೆ ಸಾಧ್ಯವಿಲ್ಲ. ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಟಿಕೆಟ್ ಹಂಚಿಕೆ ಜಾಲವನ್ನು ಯಾರೂ ನಂಬಬೇಡಿ. ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್