ಚಿತ್ರದುರ್ಗ : ಇಂದು 73ನೇ ಸಂಭ್ರಮದ ಗಣರಾಜ್ಯೋತ್ಸವ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿಸಿ ಪಾಟೀಲ್ ಇಂದು ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಮಾತನಾಡಿ ಇದು ನನ್ನ ಪುಣ್ಯ ಎಂದಿದ್ದಾರೆ.
ಈ ಹಿಂದೆ ನಾನು ಪೊಲೀಸ್ ಆಗಿದ್ದಾಗ ಇದೇ ಮೈದಾನದಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದೆ. ಆದರೆ ಇಂದು ಅದೇ ಮೈದಾನದಲ್ಲಿ ಗೌರವ ಸ್ವೀಕರಿಸುತ್ತಿದ್ದೇನೆ, ಇದು ನನ್ನ ಪುಣ್ಯ. ಜಿಲ್ಲೆಯ ಮಣ್ಣಿನ ಗುಣ ಗೊತ್ತಿದೆ. ಇದು ಕೋಟೆ ಕಲ್ಲು ಬಂಡೆಗಳ ನಾಡಗಿದ್ದರೂ ಇಲ್ಲಿನ ಜನರ ಹೃದಯ ಮೃದು.
ಈ ಹಿಂದೆ ಪೊಲೀಸ್ ಅಧಿಕಾರಿಯಾಗಿ ಭಾಗವಹಿಸಿದ್ದೆ, ಈಗ ಸಚಿವನಾಗಿ ಭಾಗಿಯಾಗಿದ್ದೇನೆ. ಇಲ್ಲಿಂದಲೇ ಸಿನಿಮಾ ಜರ್ನಿಯನ್ನು ಶುರುಮಾಡಿದೆ. ಹೀಗಾಗಿ ಇಂದು ತವರು ಮನೆಗೆ ಬಂದಷ್ಟು ಖುಷಿ ತಂದಿದೆ ಎಂದಿದ್ದಾರೆ.