ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಾವು ಜೋರಾಗಿರುವಾಗಲೇ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಮೊದಲೇ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರಾ ನೇರಾ ಸ್ಪರ್ಧೆ ಇದೆ. ಶಾಮನೂರು ಕುಟುಂಬದ ಕ್ಷೇತ್ರವಾಗಿರುವ ದಾವಣಗೆರೆಯನ್ನು ಹೇಗಾದರೂ ಮಾಡಿ ಪಡೆಯಬೇಕೆಂಬ ಹಠ ಬಿಜೆಪಿಗರದ್ದಾಗಿದೆ. ಇದರ ನಡುವೆ ಮುಸ್ಲಿಮರು ಕೂಡ ಕಾಂಗ್ರೆಸ್ ಮೇಲೆ ಮುನಿಸನ್ನ ತೋರಿದ್ದಾರೆ. ಇದೆಲ್ಲದರ ನಡುವೆ ಬಿಗ್ ಅಪ್ಡೇಟ್ ಒಂದು ದಾವಣಗೆರೆಯಲ್ಲಿ ನಡೆದಿದೆ.
ಇಂದು ಹತ್ತಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸರಿಕರಿಯಪ್ಪ ಅವರಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ. ದುರ್ಗಾಂಬಿಕಾ ದೇವಿಗೆ ಉರುಳು ಸೇವೆ ಮಾಡಿ, ವಿಶೇಷ ಪೂಜೆಯನ್ನು ಸಲ್ಲಿಸಿ ಕಾಂಗ್ರೆಸ್ ತೊರೆದಿದ್ದಾರೆ. ಬಳಿಕ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸರಿಕರಿಯಪ್ಪ ಅವರ ಭಾವಚಿತ್ರವನ್ನು ಹಿಡಿದು ಬಿಜೆಪಿ ಪಕ್ಷಕ್ಕೆ ಜೈಕಾರ ಹಾಕಿದ್ದಾರೆ.

ದುರ್ಗಾಂಬಿಕಾ ದೇವಿಗೆ ಉರುಳು ಸೇವೆ ಮಾಡುವಾಗಲೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಅವರ ಫೋಟೋವನ್ನು ಹಿಡಿದಿದ್ದರು. ಸದ್ಯ ಈ ಬೆಳವಣಿಗೆಯಿಂದ ಕಾಂಗ್ರೆಸ್ ಕಾರ್ಯಜರ್ತರು ಯೋಚಿಸುವಂತಾಗಿದೆ. ಶಾಮನೂರು ಶಿವಶಂಕರಪ್ಪ ಅವರಿಂದ ತೆರವಾದ ದಕ್ಷಿಣ ಕ್ಷೇತ್ರಕ್ಕೆ ಅವರ ಮೊಮ್ಮಗ ಸಮರ್ಥ್ ಗೆ ಟಿಕೆಟ್ ಪಡೆದುಕೊಳ್ಳುವಲ್ಲಿ ಕುಟುಂಬದವರು ಕೂಡ ಸಕ್ಸಸ್ ಆಗಿದ್ದಾರೆ. ಇತ್ತ ಮುಸ್ಲಿಮರ ಮುನಿಸಿನ ಜೊತೆಗೆ ಯುವಕರು ಕಾಂಗ್ರೆಸ್ ಬಿಡುತ್ತಿರುವ ಬೆಳವಣಿಗೆಯೂ ನಡೆದಿದೆ. ಈ ಎಲ್ಲಾ ಸವಾಲಿನ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲ್ಲಿಸಿಕೊಂಡು ಬರಬೇಕಾದ ಅನಿವಾರ್ಯತೆ ಇದೆ. ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ಕ್ಕೇನೆ ಫಲಿತಾಂಶವೂ ಹೊರ ಬೀಳಲಿದೆ.



















