ಸುದ್ದಿಒನ್, ಬೆಂಗಳೂರು, ಮಾರ್ಚ್. 26 : ಒಳಮೀಸಲಾತಿ ಇನ್ನು ಬಗೆಹರೆಯದ ವಸ್ತುವಾಗಿದೆ. ಬೇರೆ ಬೇರೆ ಜಾತಿಯವರು ಈ ಸಂಬಂಧ ನಿರಂತರ ಹೋರಾಟ ಮಾಡ್ತಾನೆ ಇದಾರೆ. ಆದರೂ ಸ್ಪಷ್ಟತೆ ಮಾತ್ರ ಸಿಕ್ಕಿಲ್ಲ. ಈ ಸಂಬಂಧ ಬೆಂಗಳೂರಿನಲ್ಲಿ ಹೆಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗಾಗಲೇ ಒಳ ಮೀಸಲಾತಿಯನ್ನ ಜಾರಿಗೆ ತಂದಿದೆ. ಎರಡು ಸದನದಲ್ಲೂ ಕೂಡ ಒಳ ಮೀಸಲಾತಿಯ ಬಿಲ್ ಪಾಸಾಗಿದೆ. ರಾಜ್ಯಪಾಲರು ಕೂಡ ಇದಕ್ಕೆ ಅಂಕಿತ ಹಾಕಿದ್ದಾರೆ. ಈಗಾಗಲೇ ಒಳ ಮೀಸಲಾತಿಯಲ್ಲಿ ಮಾದಿಗರಿಗೆ 6% ರಿಸರ್ವೇಶನ್, ಬಲಗೈನವರಿಗೆ 6%, ಉಳಿದಂತೆ 5% ನೀಡಲಾಗಿದೆ.
ಆ ಹಂಚಿಕೆಯಂತೆ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಒಳ ಮೀಸಲಾತಿ ಕೊಡುತ್ತಾ ಇದ್ದಾರೆ. ಒಳ ಮೀಸಲಾತಿ ಈಗಾಗಲೇ ಶಿಕ್ಷಣದಲ್ಲಿ ಜಾರಿಯಾಗಿದೆ. ನಮ್ಮ ವಿದ್ಯಾರ್ಥಿಗಳು ಪಿಜಿ ಸೀಟ್ ಗಳನ್ನ ತೆಗೆದುಕೊಂಡಿದ್ದಾರೆ. ಈಗಾಗಲೇ ಅನುಷ್ಠಾನ ಆಗಿದೆ. ಒಳ್ಳೊಳ್ಳೆ ಸೀಟುಗಳು ನಮ್ಮ ಮಾದಿಗರಿಗೆ ಸಿಕ್ಕಿದೆ. ಎಂದು ಕೂಡ ಈ ರೀತಿಯ ಪಿಜಿ ಸೀಟುಗಳು ಸಿಕ್ಕಿರಲಿಲ್ಲ. ಗಗನ ಕುಸುಮವಾಗಿತ್ತು. ಈ ಒಳ ಮೀಸಲಾತಿ ಆದ್ಮೇಲೆ ನಮ್ಮವರಿಗೆ ಸಿಕ್ಕಿದೆ.

ಈಗ ಎಸ್ಸಿಗಳಿಗೆ 17% ಮಾಡೋಕೆ ಬರಲ್ಲ, 15%ನಲ್ಲಿಯೇ ಮಾಡಿಕೊಳ್ಳಬೇಕು ಅಂದಿದ್ದಾರೆ. ಕೋರ್ಟ್ ನಲ್ಲಿ ಅಫಿಡೆವಿಟ್ ಹಾಕಿ ತೆಗೆದುಕೊಂಡಿದ್ದಾರೆ. 15ಕ್ಕೆ ಮಾಡಿ. ಆ ರೇಶೂ ಪ್ರಕಾರ ಹಂಚಿಕೆ ಮಾಡಿ. ಐದೇ ನಿಮಿಷದ ಕೆಲಸ ಅದು. ಅದನ್ನ ದಿನಗಟ್ಟಲೆ ಎಳೆಯೋದು ಯಾಕೆ. ಬೇರೆ ಜಾತಿಯವರು ಬೇಡ ಅಂತಾನೇ ಅಂತಾರೆ. ನಾವೂ 35-40 ವರ್ಷದಿಂದ ಅನ್ಯಾಯ ಅನುಭವಿಸ್ತಾ ಇದ್ದೀವಿ. ಇಲ್ಲಿ ಪ್ರಬಲರಿದ್ದಾರೆ. ಅವರ ಜೊತೆಗೆ ನಾವೂ ಯುದ್ಧ ಮಾಡೋಕೆ ಆಗಲ್ಲ ಅಂತ ಪ್ರತ್ಯೇಕ ಹೋರಾಟ ಮಾಡಿ, ಮೀಸಲಾತಿ ಕೊಡಿ ಅಂತ ಹೇಳಿ ತೆಗೆದುಕೊಂಡಿದ್ದೀವಿ ಎಂದಿದ್ದಾರೆ.


















