ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಮಾರ್ಚ್. 25 : ನಗರದ ನಗರದ ನೆಹರು ಸರ್ಕಲ್ ಬಳಿ ಇರುವ ಇಂದಿರಾ ಕಾಂಪ್ಲೆಕ್ಸ್ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದ ನಗರಸಭೆ ವಾಣಿಜ್ಯ ಮಳಿಗೆಗಳ ತೆರವಿಗೆ ಬುಧವಾರ ಭಾರೀ ಪೊಲೀಸ್ ಬಂದೋಬಸ್ತಿನಲ್ಲಿ ಸಿದ್ಧತೆಗಳು ನಡೆದಿತ್ತು.
ಬೆಂಗಳೂರು ರಸ್ತೆ, ಪಾವಾಗಡ ರಸ್ತೆ ಹಾಗೂ ಮಹದೇವಿ ರಸ್ತೆಯಲ್ಲಿರುವ 92 ಮಳಿಗೆಗಳು ಸಾರ್ವಜನಿಕರಿಗೆ ಅಪಾಯಕಾರಿಯಾಗಿದ್ದು, ಹೈಕೋರ್ಟ್ ಆದೇಶದ ಬಳಿಕ ತೆರವು ಕಾರ್ಯ ಆರಂಭವಾಗಿತ್ತು.
ಪೌರಾಯುಕ್ತ ಡಾ.ನಾಗವೇಣಿ ಅವರ ದಿಟ್ಟ ಕ್ರಮದಿಂದ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದರು ಆದರೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ ಟಿ ಕುಮಾರಸ್ವಾಮಿ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಕಾಂಪ್ಲೆಕ್ಸ್ ಒಡೆಯದಂತೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.. ಕಾಂಪ್ಲೆಕ್ಸ್ ಗಳನ್ನ ಖಾಲಿ ಮಾಡಲು ಐದು ದಿನ ಕಾಲಾವಕಾಶವನ್ನು ಕೇಳಿದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೌರಯುಕ್ತೆ ಡಾ.ನಾಗವೇಣಿ ಮಾನವತೆಯ ದೃಷ್ಟಿಯಿಂದ ಮೂರು ದಿನದ ಒಳಗಾಗಿ ಕಾಂಪ್ಲೆಕ್ಸ್ ಖಾಲಿ ಮಾಡುವಂತೆ ಸೂಚನೆ ನೀಡಿದರು.. ಮಹಾದೇವಿ ರಸ್ತೆಯಲ್ಲಿ ಇರುವಂತಹ ಕೆಲವು ಕಾಲಿ ಕಾಂಪ್ಲೆಕ್ಸ್ ಗಳನ್ನ ತೆರೆವಿನ ಕಾರ್ಯವನ್ನು ಮಾಡಿದರು. ಚಳ್ಳಕೆರೆ ಡಿವೈಎಸ್ಪಿ ಹಾಗೂ ಪೋಲಿಸ್ ಇನ್ಸ್ಪೆಕ್ಟರ್ ಇವರ ಪೊಲೀಸ್ ಬಂದೋಬಸ್ತವನ್ನು ಕಲ್ಪಿಸಿದ್ದರು.









