ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 14 : ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿ ಹಾಗೂ ನೌಕರರ ಸಂಘ (ರಿ), ಬೆಂಗಳೂರು ಕೇಂದ್ರ ಸಂಘದ 24 ಸದಸ್ಯರ ಸ್ಥಾನಗಳಿಗೆ ಇಂದು ನಡೆದ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಕೆ. ನಾಗರಾಜ್ ಅವರು ಆಯ್ಕೆಯಾಗಿದ್ದಾರೆ.
ಸಂಘದ ಅಭಿವೃದ್ಧಿ, ಸಿಬ್ಬಂದಿಗಳ ಹಿತಾಸಕ್ತಿ ಹಾಗೂ ಇಲಾಖೆಯ ಪ್ರಗತಿಗಾಗಿ ಅವರು ಪರಿಣಾಮಕಾರಿ ನಾಯಕತ್ವವನ್ನು ನೀಡುವರೆಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ. ಈ ಸಂದರ್ಭದಲ್ಲಿ ಮಂಜುನಾಥ್ ಕೆ., ಮಾಜಿ ಅಧ್ಯಕ್ಷರು, KSGEA, ಚಿತ್ರದುರ್ಗ ಹಾಗೂ ಲೆಕ್ಕ ಪರಿಶೋಧನಾಧಿಕಾರಿ, ಮುಖ್ಯ ಅಭಿಯಂತರರ ಕಚೇರಿ, ಸೆಂಟ್ರಲ್ ಝೋನ್, ಶಿವಮೊಗ್ಗ, ಇವರೊಂದಿಗೆ ಪ್ರಶಾಂತ್ ಕುಮಾರ್, B.E (ಲೆಕ್ಕ ಪರಿಶೋಧನಾಧಿಕಾರಿ), ಬಸವರಾಜ್ ಜಿ.ಸಿ (ಲೆಕ್ಕ ಪರಿಶೋಧನಾಧಿಕಾರಿ), ರಮೇಶ್ ಶಿವಾಜಿ (ಲೆಕ್ಕ ಪರಿಶೋಧನಾಧಿಕಾರಿ) ಹಾಗೂ ನಯಾಜ್ ಅಹಮದ್ ಅವರು ಕೆ. ನಾಗರಾಜ್ ಅವರ ವಿಜಯಕ್ಕೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.






