ಎರಡು ನಿಮಿಷ ತಡ ಬಂದಿದ್ದಕ್ಕೆ ಈ ಶಾಲೆಯಲ್ಲಿ ಕೊಟ್ಟ ಶಿಕ್ಷೆ ಫುಲ್ ವೈರಲ್ !

1 Min Read

 

ಬೆಂಗಳೂರು : ಪ್ರತಿಷ್ಠಿತ ಶಾಲೆಯೊಂದರ ಅಮಾನವೀಯ ಶಿಕ್ಷೆ ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಎರಡು ನಿಮಿಷ ತಡವಾಗಿ ಶಾಲೆಗೆ ಬಂದಿದ್ದಕ್ಕಾಗಿ ಆರನೇ ವರ್ಷದ ಪುಟ್ಟ ಮಗುವನ್ನು ಸುಮಾರು ಎರಡು ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಶಾಲಾ ಮಂಡಳಿ ತನ್ನ ಕ್ರೌರ್ಯ ಮೆರೆದಿದೆ.

2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ! ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದು 6 ವರ್ಷದ ಮಗುವನ್ನು 2 ನಿಮಿಷ ತಡವಾಗಿ ಬಂದಿದ್ದಕ್ಕೆ 2 ಗಂಟೆ ಸುಡುವ ಬಿಸಿಲಿನಲ್ಲಿ ನಿಲ್ಲಿಸಿ ಅಮಾನವೀಯವಾಗಿ ಶಿಕ್ಷಿಸಿದೆ. ಇದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಮಗು ಶಾಲೆಗೆ ಕೇವಲ 2 ನಿಮಿಷ ತಡವಾಗಿ ತಲುಪಿದೆ. ಇದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿದ ಶಾಲಾ ಸಿಬ್ಬಂದಿ, ಮೊದಲನೇ ತರಗತಿಯ ಮಗುವನ್ನು ಮಧ್ಯಾಹ್ನದ ಅತೀ ಹೆಚ್ಚು ತಾಪಮಾನವಿರುವ ಬಿಸಿಲಿನಲ್ಲಿ ಎರಡು ಗಂಟೆಗಳ ಕಾಲ ಮೈದಾನದಲ್ಲಿ ನಿಲ್ಲಿಸಿದ್ದಾರೆ. ಸುಡುವ ಬಿಸಿಲಿಗೆ ಮಗು ಕಂಗಾಲಾಗಿದ್ದು, ದೈಹಿಕವಾಗಿ ಅಸ್ವಸ್ಥಗೊಂಡಿದೆ. ಆರು ವರ್ಷದ ಮಗುವಿಗೆ ಇಂತಹ ಕಠಿಣ ಶಿಕ್ಷೆ ನೀಡಿರುವುದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲು ಹೋದಾಗ, ಕ್ಷಮೆ ಕೇಳುವ ಬದಲು ಅತ್ಯಂತ ಅಹಂಕಾರದಿಂದ ವರ್ತಿಸಿದ್ದಾರೆ. “ನಮ್ಮ ಶಿಸ್ತೇ ಹೀಗೆ, ನಿಮಗೆ ಇಷ್ಟವಿಲ್ಲದಿದ್ದರೆ ಮಗುವನ್ನು ಕರೆದುಕೊಂಡು ಹೋಗಿ” ಎನ್ನುವ ರೀತಿಯಲ್ಲಿ ಬೇಜವಾಬ್ದಾರಿಯುತ ಉತ್ತರ ನೀಡಿದ್ದಾರೆ ಎಂದು ಪೋಷಕರು ದೂರಿದ್ದಾರೆ.

Share This Article