ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 13 : ಜಿಲ್ಲೆಯಲ್ಲಿ ಅತಿಹೆಚ್ಚು ಪೋಕ್ಸೊ ಪ್ರಕರಣದಲ್ಲಿ ಇರುವ ಆರೋಪಿಗಳನ್ನು ಕಾಣಲಾಯಿತು. ಜೊತೆಗೆ ಸಮಾಜದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗುವ ಯುವಕ, ಯುವತಿಯರನ್ನು ಇಂದು ಹೆಚ್ಚು ಕಾಣಲಾಗುತ್ತಿದೆ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಹತ್ತಿಕ್ಕಲು ಸಮಾಜಶಾಸ್ತ್ರ ವಿಧ್ಯಾರ್ಥಿಗಳು ಪಣತೊಡಬೇಕಿದೆ ಎಂದು ಡಾ.ಸ.ರಾ.ಲೇಪಾಕ್ಷ, ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕರು ತಿಳಿಸಿದರು.
ಹೆಚ್ ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ಸಮಾಜಶಾಸ್ತ್ರ ಸ್ನಾತಕೋತ್ತರ ಹಾಗೂ ಸ್ನಾತಕ ವಿಧ್ಯಾರ್ಥಿಗಳೊಂದಿಗೆ ಕಾರಾಗೃಹ ಹಾಗೂ ರುಡ್ ಸೆಟ್ ಸಂಸ್ಥೆ ಗೆ ಅವರು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಸಮಸ್ಯೆಗಳು ಇಂದು ಸಮಾಜವನ್ನು ರೋಗಗ್ರಸ್ತ ವನ್ನಾಗಿಸುತ್ತಿರುವುದು ದೇಶದ ಅಭಿವೃದ್ಧಿಗೆ ಇಂದು ಅಡಚಣೆ ಆಗುತ್ತಿರುವುದನ್ನು ಗಮನಿಸಬಹುದು. ಇಂತಹ ಸಂದರ್ಭದಲ್ಲಿ ಸಮಾಜ ವಿಜ್ಞಾನ ಅದರಲ್ಲೂ ಸಮಾಜಶಾಸ್ತ್ರ ವಿಧ್ಯಾರ್ಥಿಗಳ ಹಾಗೂ ಅಧ್ಯಾಪಕರ ಮತ್ತು ಸಂಶೋಧನಾ ವಿಧ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾದದ್ದು, ಈ ನಿಟ್ಟಿನಲ್ಲಿ ಶೈಕ್ಷಣಿಕ ಭೇಟಿಯ ಮೂಲಕ ಕಾರಾಗೃಹ ಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಹಾಗೂ ಸನ್ನಿವೇಶ ಇವುಗಳನ್ನು ಅವಲೋಕನ ಮಾಡಲಾಯಿತು.
ಕಾರಾಗೃಹದಲ್ಲಿನ ವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶ್ರೀ ಸಿದ್ದರಾಮ ಪಾಟೀಲ್, ಅಧೀಕ್ಷಕರು ಹಾಗೂ ರಾಜೇಂದ್ರ ಕೋಪರ್ಡ್,ಜೈಲರ್ ಹಾಗೂ ಸಿಬ್ಬಂದಿ ತಿಳಿಸಿಕೊಟ್ಟರು. ಜೊತೆಗೆ ರುಡ್ ಸೆಟ್ ಸಂಸ್ಥೆ ಗೆ ಭೇಟಿ ನೀಡಿ ಯುವಕರಿಗೆ ಲಭ್ಯವಿರುವ ಉದ್ಯೋಗ ಹಾಗೂ ತರಬೇತಿ ಬಗ್ಗೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಸಂಸ್ಥೆಯ ತೋಟಪ್ಪ ಹಾಗೂ ಸಿಬ್ಬಂದಿ ಇಲ್ಲಿನ ಸಂಪೂರ್ಣ ಮಾಹಿತಿಯನ್ನು ನೀಡಿದರು ಸ್ವಯಂ ಉದ್ಯೋಗ ಹಾಗೂ ಬ್ಯಾಂಕ್ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಾ.ಕೆ.ಸಿ.ಶರಣಪ್ಪ,ಮುಖ್ಯಸ್ಥರು ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗ ಹಾಗೂ ಡಾ.ಸಿ.ಎಂ.ಪ್ರಕಾಶ್ ,ಪ್ರೊ.ವಿ. ನಾಗರಾಜ್,ಮುಖ್ಯಸ್ಥರು ಸ್ನಾತಕ ಸಮಾಜಶಾಸ್ತ್ರ ವಿಭಾಗ,ಡಾ.ಚಿತ್ತಯ್ಯ ಹಾಗೂ ಸ್ನಾತಕೋತ್ತರ ಹಾಗೂ ಸ್ನಾತಕ ಪದವಿ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.






