ಚಿತ್ರದುರ್ಗ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ…!

1 Min Read

ಸುದ್ದಿಒನ್, ಚಿತ್ರದುರ್ಗ: 11 ಮಾರ್ಚ್, ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ಘಟಕ, ಐಕ್ಯುಎಸಿ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕರಾದ ಶ್ರೀಮತಿ ಗಾಯತ್ರಿ ಶಿವರಾಮ್ ಮಾತನಾಡಿ, ಮಹಿಳೆಯರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಮನೆತನದಿಂದ ಹಿಡಿದು ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಜಗತ್ತಿನವರೆಗೆ ತಮ್ಮ ಸಾಮಥ್ರ್ಯವನ್ನು ತೋರಿಸುತ್ತಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾಗಿದ್ದು, ಪ್ರತಿಯೊಬ್ಬ ಮಹಿಳೆಯೂ ದೃಢ ಮನೋಬಲ, ಆತ್ಮವಿಶ್ವಾಸ ಹಾಗೂ ಸಂಕಲ್ಪದೊಂದಿಗೆ ಜೀವನವನ್ನು ಎದುರಿಸಬೇಕು. ಮಹಿಳೆಯರು ಯಾವುದೇ ಸವಾಲುಗಳನ್ನು ಎದುರಿಸಿದರೂ ತಮ್ಮ ಇಚ್ಛಾಶಕ್ತಿ ಹಾಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಶಿಕ್ಷಣ, ತಂತ್ರಜ್ಞಾನ ಮತ್ತು ಹೊಸ ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರು ತಮ್ಮ ಜೀವನವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಡಾ.ಬಿ ಜಿ ಕುಮಾರಸ್ವಾಮಿ, ಪ್ರೊ. ಬಸಂತಕುಮಾರಿ, ಮಹಿಳಾ ಘಟಕದ ಸಂಚಾಲಕರುಗಳಾದ ಪ್ರೊ.ಬೀನಾ ಶೆರಿಲ್, ಪ್ರೊ.ಪವಿತ್ರ ಎನ್, ಮಹಿಳಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಪ್ರೊ. ಶ್ರುತಿ ಎಂ.ಕೆ ಅವರು ಸಂವಿಧಾನ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ತ್ರಿಶಾ ಪ್ರಾರ್ಥಿಸಿ, ಬಿಬಿ ಹಾಜಿರಾ ಸ್ವಾಗತಿಸಿ, ಯಶಸ್ವಿನಿ ನಿರೂಪಿಸಿ, ಅದ್ಬಿಯಾ ಅಂಜುಮ್ ವಂದಿಸಿ, ಅಮೂಲ್ಯ ಚಂದ್ರ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Share This Article